. ಪತ್ರಕರ್ತೆ ಕೆಲಸ ಮುಗಿಸಿ ಮೆಟ್ರೋ ಸ್ಟೆಷನ್ ನ ಮೆಟ್ಟಿಲು ಇಳಿದು ಮನೆಗೆ ತೆರಳುತ್ತಿದ್ದಾಗ ಕಾಮುಕನೊಬ್ಬ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ.

ನವದೆಹಲಿ(ನ.17): ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರೇ ಹುಷಾರ್​​... ನೀವು ಮೆಟ್ರೋದಲ್ಲಿ ಪ್ರಯಾಣಿಸಬೇಕಾದರೆ ಎಚ್ಚರದಿಂದಿರಿ. ಒಬ್ಬೊಬ್ಬರೇ ಓಡಾಡಬೇಡಿ, ಯಾಕೆಂದರೆ ಮೆಟ್ರೋ ನಿಲ್ದಾಣದಲ್ಲಿ ಕಾಮುಕರಿರುತ್ತಾರೆ ಎಚ್ಚರ.. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ರಕರ್ತೆ ಮೇಲೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿದ್ದಾನೆ. ನವೆಂಬರ್ 13ರಂದು ದೆಹಲಿಯ ಮೆಟ್ರೋ ಸ್ಟೇಷನ್​ನಲ್ಲಿ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪತ್ರಕರ್ತೆ ಕೆಲಸ ಮುಗಿಸಿ ಮೆಟ್ರೋ ಸ್ಟೆಷನ್ ನ ಮೆಟ್ಟಿಲು ಇಳಿದು ಮನೆಗೆ ತೆರಳುತ್ತಿದ್ದಾಗ ಕಾಮುಕನೊಬ್ಬ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಲೈಂಗಿಕ ಕಿರುಕುಳ ನೀಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.