ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್. ಅವರು ತಮ್ಮ ಜೀವನದ ಕಥೆಯನ್ನ ತಾವೇ ಹೇಳಿರುವ ಕಥಾ ಹಂದರ ಹೊಂದಿರುವ ‘ನಾನು ಪಾರ್ವತಿ’ ಪುಸ್ತಕ ಇಂದು ಬಿಡುಗಡೆಯಾಯಿತು.
ಬೆಂಗಳೂರು (ಡಿ.10): ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್. ಅವರು ತಮ್ಮ ಜೀವನದ ಕಥೆಯನ್ನ ತಾವೇ ಹೇಳಿರುವ ಕಥಾ ಹಂದರ ಹೊಂದಿರುವ ‘ನಾನು ಪಾರ್ವತಿ’ ಪುಸ್ತಕ ಇಂದು ಬಿಡುಗಡೆಯಾಯಿತು.
ಪಾರ್ವತಮ್ಮನವರು ಇದ್ದಾಗ ಹೇಳಿದ ಅನುಭವದ ಕಥನವನ್ನು ಸಾಹಿತಿ ಮತ್ತು ಪತ್ರಕರ್ತ ಜೋಗಿ ನಿರೂಪಿಸಿದ್ದಾರೆ. ಚಿತ್ರಲೋಕದ ಕೆ.ಎಂ.ವೀರೇಶ್ ಈಗ ‘ನಾನು ಪಾವರ್ತಿ’ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಪುಸ್ತಕದ ಬಿಡುಗಡೆಗೆ ಕಿಚ್ಚ ಸುದೀಪ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಗಮಿಸಿದ್ದರು. ರಾಜ್ ಫ್ಯಾಮಿಲಿಯ ಸದಸ್ಯರೂ ಭಾಗವಹಿಸಿದ್ದರು. ನಿರ್ದೇಶಕ ಭಗವಾನ್, ಸಾ.ರಾ.ಗೋವಿಂದು, ನಟಿ ಜಯಮಾಲಾ, ಕನ್ನಡ ಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಪಾಲ್ಗೊಂಡಿದ್ದರು.
