ನವದೆಹಲಿ : ಬಿಜೆಪಿಯಲ್ಲಿದ್ದುಕೊಂಡೇ ತಮ್ಮ ಪಕ್ಷವನ್ನು ಕಠುವಾಗಿ ಟೀಕಿಸುವ ಸಂಸದ ಶತ್ರುಘ್ನ ಸಿನ್ಹಾಗೆ ಪಕ್ಷವೊಂದರಿಂದ ಇದೀಗ ಆಹ್ವಾನ ಬಂದಿದೆ.

ಇತ್ತೀಚೆಗಷ್ಟೇ ಪಂಚರಾಜ್ಯ ಚುನಾವಣೆಯಲ್ಲಿ ಸೋತಿದ್ದು, ಸಮೀಪಿಸುತ್ತಿರುವ ಲೋಕಸಭಾ ಚುನಾವಣೆ ಬೆನ್ನಲ್ಲೇ ನಡೆಯುತ್ತಿರುವ ಈ ಬೆಳವಣಿಗೆಗಳು ಬಿಜೆಪಿಗೆ ಆತಂಕ ತಂದೊಡ್ಡುವ ಲಕ್ಷಗಳು ಕಾಣುತ್ತಿವೆ. 

ಮೋದಿ ವಿರೋಧಿ ಶಾಟ್‌ಗನ್‌ಗೆ ಗುನ್ನಾ ಇಡಲು ಬಿಜೆಪಿ ಪ್ಲ್ಯಾನ್!

ಬಿಹಾರದ  ತೇಜ್ ಪ್ರತಾಪ್ ಯಾದವ್  RJDಗೆ ಸೇರ್ಪಡೆಯಾಗುವಂತೆ ಸಿನ್ಹಾ ಅವರನ್ನು ಆಹ್ವಾನಿಸಿದ್ದಾರೆ. ಅಲ್ಲದೇ ಸಿನ್ಹಾ ಅವರು ಬಿಜೆಪಿ ತೊರೆಯಲು ಸಜ್ಜಾಗಿದ್ದಾರೆ ಎಂದೂ ಕೂಡ ಅವರು ಹೇಳಿದ್ದಾರೆ. 

ಈ ಪ್ರಶ್ನೆಗೆ ಉತ್ತರ ನೀಡಲು ಬಿಜೆಪಿ ಮುಖಂಡ ಹಿಂದೇಟು !

ನಿರಂತರವಾಗಿ ತಾವು ಶತ್ರುಘ್ನ ಸಿನ್ಹಾ ಅವರೊಂದಿಗೆ ಸಂಪರ್ಕದಲ್ಲಿದ್ದು, ಅನೇಕ ಬಾರಿ ಅವರ ನಿವಾಸಕ್ಕೂ ಕೂಡ ಭೇಟಿ ನೀಡಿದ್ದೇನೆ. ಆದ್ದರಿಂದ ನಮ್ಮ ಜನತಾ ದರ್ಬಾರ್ ಸೇರಲು ಅವರಿಗೆ ಸ್ವಾಗತಿಸಿದ್ದಾಗಿ ಯಾದವ್ ಹೇಳಿದ್ದಾರೆ. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಚೌಕೀದಾರ್ ಚೋರ್ ಕೆಲಸವನ್ನು ಮುಂದುವರಿಸಿದ್ದಾರೆ. ರಫೇಲ್ ಒಪ್ಪಂದದ ಬಗೆಗಿನ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಸೂಕ್ತ ಉತ್ತರ ನೀಡುವುದರಿಂದ ದೂರ ಸರಿಯುತ್ತಿದ್ದಾರೆ ಎಂದಿದ್ದಾರೆ.