ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ವಿಪಕ್ಷಗಳೆಲ್ಲಾ ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಟಿಎಂಸಿ ಆಯೋಜಿಸಿದ ಬೃಹತ್ ರ‍್ಯಾಲಿಯಲ್ಲಿ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಪಾಲ್ಗೊಂಡಿದ್ದು, ಈ ವೇಳೆ ಕೇಳಿದ ಕೆಲ ಪ್ರಶ್ನೆಗಳಿಗೆ ಜಾಣತನದಿಂದ ಜಾರಿಕೊಂಡಿದ್ದಾರೆ. 

ಕೋಲ್ಕತಾ : ಬಿಜೆಪಿಯಲ್ಲಿದ್ದುಕೊಂಡೇ ಸದಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಸಂಸದ ಶತ್ರುಘ್ನ ಸಿನ್ಹಾ ತೃಣಮೂಲಕ ಕಾಂಗ್ರೆಸ್ ಏರ್ಪಡಿಸುವ ವಿಪಕ್ಷಗಳ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. 

ಈ ವೇಳೆ ಅಯೊಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ ಮಾಧ್ಯಮಗಳು ಸಿನ್ಹಾ ಪ್ರಶ್ನೆ ಮಾಡಿದ್ದು, ಯಾವುದೇ ಉತ್ತರ ನೀಡದೇ ಮೌನವಾಗಿ ಮುನ್ನಡೆದಿದ್ದಾರೆ. 

ಒಂದು ವೇಳೆ ದೇಶಕ್ಕೆ ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿಯಾಗ್ತಾರಾ ಎನ್ನುವ ಪ್ರಶ್ನೆಗೂ ಅವರು ಜಾಣತನದಿಂದಲೇ ಉತ್ತರಿಸಿದ್ದಾರೆ. 

ಅವರೊಬ್ಬ ರಾಷ್ಟ್ರೀಯ ನಾಯಕಿ, ಹೆಚ್ಚು ಅನುಭವವನ್ನು ಹೊಂದಿದ ನಾಯಕಿ, ಇದಕ್ಕೆ ಇನ್ನೂ ಹೆಚ್ಚಿನ ಸಮಯಾವಕಾಶವಿದೆ ಎಂದು ಹೇಳಿದ್ದಾರೆ. 

ಕೆಲಸ ಮಾಡುವುದು ಹಾಗೂ ಭರವಸೆ ನೀಡೋದಕ್ಕೆ ತುಂಬಾ ವ್ಯತ್ಯಾಸ ಇದೆ. ಮುಂದಿನ ಪ್ರಧಾನಿ ಯಾರಾಗಬೇಕು ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ. ಇದು ನಮ್ಮ ಕೆಲಸವಲ್ಲ ಎಂದಿದ್ದಾರೆ. 

ಅಲ್ಲದೇ ಮುಂದಿನ ಚುನಾವಣೆ ಅತ್ಯಂತ ಇಂಟರೆಸ್ಟಿಂಗ್ ಆಗಿರಲಿದೆ ಎನ್ನುವುದು ಶತ್ರುಘ್ನ ಸಿನ್ಹಾ ಅವರ ನಂಬಿಕೆಯಾಗಿದೆ.