ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆಯಿಂದ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಆಫೀಸಿಗೆ ತೆರಳುವ ಜನರು ಪರದಾಡುವಂತಾಯಿತು. ಟ್ರಾಫಿಕ್ ನಿಯಂತ್ರಿಸುವಲ್ಲಿ ಪೋಲಿಸರು ಸುಸ್ತೋ ಸುಸ್ತು.!

ಇದೇ ರೀತಿ ಹೈದರಾಬಾದ್ ನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ನಡೆದ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರಿದ್ದರು. ಆದರೆ ಮಳೆಯ ಕಾರಣ ಅದನ್ನು ರದ್ದುಗೊಳಿಸಿದ್ದಾರೆ. ದೆಹಲಿಯ ಐಐಟಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಸಮಾಲೋಚನೆ ನಡೆಸುವಾಗ ಮಳೆಯ ಬಗ್ಗೆ ಜೋಕ್ ಕಟ್ ಮಾಡಿದ್ದಾರೆ. "ಹೊರಗಡೆ ಇಷ್ಟು ಜೋರಾಗಿ ಮಳೆ ಬರುತ್ತಿದ್ದರೂ ಇಲ್ಲಿಗೆ ಬಂದಿರುವ ನೀವು ಪ್ರಶಸ್ತಿಗೆ ಅರ್ಹರಾಗಿದ್ದೀರಿ. ಬೋಟ್ ನಲ್ಲಿ ಬಂದಿದ್ದೀರಾ ಹೇಗೆ? ನಿಮಗೆ ನಾನು ಸೆಲ್ಯೂಟ್ ಮಾಡುತ್ತೇನೆ” ಎಂದು ಕೆರ್ರಿ ತಮಾಷೆಯಾಗಿ ಮಾತಾಡಿದ್ದಾರೆ.