ನವದೆಹಲಿ(ಮೇ.15): ಉಗ್ರ ಅಫ್ಜಲ್ ಗುರು ಪರ ಘೋಷಣೆ ಕೂಗಿದ ಆರೋಪ ಹೊತ್ತಿರುವ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲೀದ್ ಕೊನೆಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿರುವ ಉಮರ್ ಖಾಲೀದ್, ತಾವು Ph.D ಪದವಿ ಪಡೆದಿದ್ದು, ದೇಶದ ತೆರಿಗೆದಾರರ ಋಣ ತೀರಿಸಿದ್ದಾಗಿ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಕುರಿತು ..‘ನೀವು ಯಾವಾಗ ದೇಶದ ತೆರಿಗೆದಾರರ ಋಣ ತೀರಿಸುತ್ತೀರಿ..’ಎಂದು ಉಮರ್ ಖಾಲೀದ್ ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಂಕಷ್ಟದ ದಿನಗಳಲ್ಲಿ ತಮ್ಮ ಸಹಾಯಕ್ಕೆ ಬಂದ ಎಲ್ಲರಿಗೂ ಧನ್ಯವಾದ ಸಲ್ಲಿಸಿರುವ ಉಮರ್ ಖಾಲೀದ್, ದೇಶಕ್ಕಾಗಿ ದುಡಿಯುವ ತಮ್ಮ ನಿರ್ಧಾರ ಅಚಲ ಎಂದು ಹೇಳಿದ್ದಾರೆ.