ನವದೆಹಲಿ(ಜು.16): ಈತನ ಹೆಸರು ರಾಮಜಲ್ ಮೀನಾ. ಈತನ ವೃತ್ತಿ ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸೆಕ್ಯೂರಿಟಿ ಗಾರ್ಡ್. ನಿತ್ಯ ವಿವಿಯ ಗೇಟ್ ಕಾಯುವ ರಾಮಲಾಲ್, ಇದೀಗ ಅದೇ ವಿವಿಯ ವಿದ್ಯಾರ್ಥಿ.

ಹೌದು, JNUವಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ರಾಮಜಲ್ ಮೀನಾ, ವಿವಿಯ ಪ್ರವೇಶ ಪರೀಕ್ಷೆ ಪಾಸಾಗಿ ಬಿ.ಎ ಪದವಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ.

ರಷ್ಯನ್ ಭಾಷೆಯಲ್ಲಿ ಬಿ.ಎ ವ್ಯಾಸಾಂಗ ಮಾಡುತ್ತಿರುವ ರಾಮಜಲ್ ಮೀನಾ, ಮೂಲತಃ ರಾಜಸ್ಥಾನದವರು. ಅಲ್ಲದೇ ರಾಜಸ್ಥಾನ ವಿವಿಯಿಂದ ಪದವಿ ಕೂಡ ಪಡೆದಿದ್ದಾರೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಕ್ಕೆ ನೆರವಾಗಲು ರಾಮಜಲ್  ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಉನ್ನತ ವ್ಯಾಸಾಆಂಗ ಮಾಡಬೇಕು ಎಂಬ ಆತನ ಹಂಬಲ ಮಾತ್ರ ಇನ್ನೂ ಜೀವಂತವಾಗಿಯೇ ಇದೆ.

ಯುಪಿಎಸ್’ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿರುವ ರಾಮಜಲ್, ಇದಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಅವರ ಪರಿಶ್ರಮ ಫಲ ನೀಡಿ ಅವರ ಕನಸು ನನಸಾಗಲಿ ಎಂಬುದೇ ಎಲ್ಲರ ಹಾರೈಕೆ.