ಐಎಸ್ಎಸ್’ಎಫ್ ವಿಶ್ವಕಪ್ ನಲ್ಲಿ ಭಾರತ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 50 ಮೀ ಪುರುಷ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಜಿತು ರೈ ಪ್ರಥಮ ಸ್ಥಾನ ಪಡೆದರು. 10 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಬಳಿಕ ಇದು 2 ನೇಯ ಪದಕವಾಗಿದೆ.

ನವದೆಹಲಿ (ಮಾ.01): ಐಎಸ್ಎಸ್’ಎಫ್ ವಿಶ್ವಕಪ್ ನಲ್ಲಿ ಭಾರತ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 50 ಮೀ ಪುರುಷ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಜಿತು ರೈ ಪ್ರಥಮ ಸ್ಥಾನ ಪಡೆದರು. 10 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಬಳಿಕ ಇದು 2 ನೇಯ ಪದಕವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೂಟಿಂಗ್ ನಲ್ಲಿ 226.9 ಅಂಕ ಗಳಿಸಿದ ಅಮನ್ ಪ್ರೀತ್ ಸಿಂಗ್ ಗೆ ಬೆಳ್ಳಿ ಪದಕ ಲಭಿಸಿದೆ. ಇರಾನಿನ ವಾಹಿದ್ ಗೋಲ್ಕಂಡನ್ 208 ಅಂಕಗಳನ್ನು ಗಳಿಸಿದ್ದು ಅವರಿಗೆ ಕಂಚಿನ ಪದಕ ಸಿಕ್ಕಿದೆ. ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವಕಪ್ ಪದಕ ಗೆದ್ದಿದ್ದು ಇದು ಅವರ ಮೊದಲ ಪದಕವಾಗಿದೆ.

ಕಳೆದ ವರ್ಷ ಹಾಗೂ ಈ ಬಾರಿಯ 2 ಚಿನ್ನದ ಸೇರಿದಂತೆ ವಿಶ್ವಕಪ್ ನಲ್ಲಿ ಜಿತೂ ರೈ ಒಟ್ಟು 9 ಪದಕಗಳನ್ನು ಗೆದ್ದಂತಾಗಿದೆ.