ಉಚಿತ ಹಾಗೂ ಕಡಿಮೆ ವೆಚ್ಚದ ಕಾಲಿಂಗ್ ಸೌಲಭ್ಯ ಹಾಗೂ ಡೇಟಾದಿಂದ ಜಿಯೋ ಬ್ರಾಂಡ್ ಜನಪ್ರಿಯಗೊಂಡಿತ್ತು. ಆದರೆ ಇದೀಗ ಜಿಯೋ ಪಾನಿಪೂರಿವಾಲಾ ಸಾಮಾಝಿಕ ಜಾಲಾತಾಣಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದಾನೆ. ಗುಜರಾತ್'ನ ಪೋರಬಂದರಿನ ಪಾನಿಪೂರಿ ವ್ಯಾಪಾರಿ ರವಿ ಜಗದಂಬಾ ಎಂಬಾತ ಟೆಲಿಕಾಂ ಕಂಪೆನಿ ರಿಲಾಯನ್ಸ್ ಜಿಯೋ ನೀಡುವ ಕಡಿಮೆ ದರದ ಪ್ಲಾನ್'ಗಳಿಂದ ಪ್ರಭಾವಿತನಾಗಿ, ಗ್ರಾಹಕರ ಗಮನಸೆಳೆಯಲು ವಿಶೇಷ ಆಫರ್ ಒಂದನ್ನು ನೀಡುತ್ತಿದ್ದಾನೆ. ಈ ಆಫರ್ ಎಲ್ಲರಿಗೂ ಅನ್ವಯಿಸುತ್ತದೆ. ಇದೀಗ ಜಿಯೋಗೆ ಹೋಲಿಕೆಯಾಗುವ 'ಗೋಲ್'ಗಪ್ಪಾ ಖಾವೋ(ಗೋಲ್ಗಪ್ಪಾ ತಿನ್ನಿ) ಆಫರ್ ಮೂಲಕ ರವಿ ಆನಗರದೆಲ್ಲೆಡೆ ಫೇಮಸ್ ಆಗಿದ್ದಾನೆ.
ಗುಜರಾತ್(ಮೇ.23): ಉಚಿತ ಹಾಗೂ ಕಡಿಮೆ ವೆಚ್ಚದ ಕಾಲಿಂಗ್ ಸೌಲಭ್ಯ ಹಾಗೂ ಡೇಟಾದಿಂದ ಜಿಯೋ ಬ್ರಾಂಡ್ ಜನಪ್ರಿಯಗೊಂಡಿತ್ತು. ಆದರೆ ಇದೀಗ ಜಿಯೋ ಪಾನಿಪೂರಿವಾಲಾ ಸಾಮಾಝಿಕ ಜಾಲಾತಾಣಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದಾನೆ. ಗುಜರಾತ್'ನ ಪೋರಬಂದರಿನ ಪಾನಿಪೂರಿ ವ್ಯಾಪಾರಿ ರವಿ ಜಗದಂಬಾ ಎಂಬಾತ ಟೆಲಿಕಾಂ ಕಂಪೆನಿ ರಿಲಾಯನ್ಸ್ ಜಿಯೋ ನೀಡುವ ಕಡಿಮೆ ದರದ ಪ್ಲಾನ್'ಗಳಿಂದ ಪ್ರಭಾವಿತನಾಗಿ, ಗ್ರಾಹಕರ ಗಮನಸೆಳೆಯಲು ವಿಶೇಷ ಆಫರ್ ಒಂದನ್ನು ನೀಡುತ್ತಿದ್ದಾನೆ. ಈ ಆಫರ್ ಎಲ್ಲರಿಗೂ ಅನ್ವಯಿಸುತ್ತದೆ. ಇದೀಗ ಜಿಯೋಗೆ ಹೋಲಿಕೆಯಾಗುವ 'ಗೋಲ್'ಗಪ್ಪಾ ಖಾವೋ(ಗೋಲ್ಗಪ್ಪಾ ತಿನ್ನಿ) ಆಫರ್ ಮೂಲಕ ರವಿ ಆನಗರದೆಲ್ಲೆಡೆ ಫೇಮಸ್ ಆಗಿದ್ದಾನೆ.
ಏನಿದು ಆಫರ್?
ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ವಯ ರವಿ ಗೋಲ್ಗಪ್ಪಾ ತಿನ್ನುವವರಿಗಾಗಿ ಡೈಲಿ ಹಾಗೂ ಮಾಸಿಕ ಹೀಗೆ ಎರಡು ರೀತಿಯ ಆಫರ್ ಆರಂಭಿಸಿದದ್ದಾನಂತೆ. ಡೈಲಿ ಆಫರ್ ಅನ್ವಯ 100 ರೂಪಾಯಿ ನೀಡಿ ಅನ್'ಲಿಮಿಟೆಡ್ ಅಂದರೆ ನಿಮಗೆ ಬೇಕಾದಷ್ಟು ಪಾನಿಪೂರಿ ತಿನ್ನಬಹುದು. ಇನ್ನು ಮಾಸಿಕ ಆಫರ್ 1000 ರೂಪಾಯಿದ್ದಾಗಿದೆ. 1000 ರೂಪಾಯಿ ನೀಡಿ ಇಡೀ ತಿಂಗಳು ನಿಮಗೆ ಬೇಕಾದಷ್ಟು ಪಾನಿಪೂರಿ ನೀವು ತಿನ್ನಬಹುದಾಗಿದೆ.
ಸದ್ಯ ಗೋಲ್ಗಪ್ಪಾ/ಪಾನಿಪೂರಿ ದೇಶದಾದ್ಯಂತ ಫೇಮಸ್ ಆಗಿದೆ, ಆದರೆ ಪ್ರದೇಶಗಳಿಗನ್ವಯವಾಗುವಂತೆ ಹೆಸರು ಮಾತ್ರ ಭಿನ್ನವಾಗಿದೆ. ಒರಿಸ್ಸಾ, ದಕ್ಷಿಣ ಜಾರ್ಖಂಡ್, ಛತ್ತೀಸ್ಗಡ್, ಹೈದರಾಬಾದ್ ಹಾಗೂ ತೆಲ್ಲಂಗಾಣದ ಭಾಗದಲ್ಲಿ ಇದನ್ನು 'ಗುಪ್ ಚುಪ್' ಎಂಬ ಹೆಸರಿನೊಂದಿಗೆ ಗುರುತಿಸಲಾಗುತ್ತದೆ. ಪೂರ್ವ ಉತ್ತರ ಪ್ರದೇಶ ಹಾಗೂ ನೇಪಾಳದ ಕೆಲ ಭಾಗಗಳಲ್ಲಿ ಇದನ್ನು 'ಫುಲ್ಕೀ' ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಇನ್ನು ವಿಶ್ವದಾದ್ಯಂತ ಆಲೂ ಟಿಕ್ಕಿಗೆ ಜನರು ಟಿಕ್ಕಿ ಎಂದು ಕರೆದರೆ ಮಧ್ಯಪ್ರದೇಶದ ಹೋಶಂಗಾಬಾದ್'ನಲ್ಲಿ ಪಾನಿಪೂರಿಗೆ ಟಿಕ್ಕಿ ಎಂದು ಕರೆಯುತ್ತಾರೆ.
