ಮುಂಬೈ (ಅ. 30): ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಿಮಾನಯಾನ ಕಂಪನಿ ಜೆಟ್ ಏರ್‌ವೇಸ್ ಹಣಕಾಸು ಸಹಾಯಕ್ಕಾಗಿ ಇದೀಗ ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ
ಮೊರೆ ಹೋಗಿದೆ. ಇದೇ ವೇಳೆ, ಟಾಟಾ ಕಂಪನಿ ಜತೆಗೂ ಮಾತುಕತೆ ಯಲ್ಲಿ ನಿರತವಾಗಿದೆ ಎಂದು ಹೇಳಲಾಗಿದೆ.

ಹಲವು ಖರ್ಚು ಪಾವತಿಸಲು ಹಾಗೂ ಕಂಪನಿಯ ದೈನಂದಿನ ಕಾರ್ಯನಿರ್ವಹಣೆಗೆ ಜೆಟ್ ಏರ್ವೇಸ್ ಮಾಲೀಕ ನರೇಶ್ ಗೋಯಲ್‌ಗೆ ಸಹಸ್ರಾರು ಕೋಟಿ ರು. ಹಣ ತುರ್ತಾಗಿ ಬೇಕಾಗಿದೆ. ಹೀಗಾಗಿ ಅವರು ಅಂಬಾನಿ, ಟಾಟಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.