ಜೆಟ್ ಏರ್ವೇಸ್’ನಿಂದ ಪ್ರಯಾಣಿಕರಿಗೆ ಭರ್ಜರಿ ಆಫರ್

First Published 17, Mar 2018, 4:00 PM IST
Jet Airways Offer On Domestic Flight Tickets
Highlights

ಜೆಟ್ ಏರ್ವೇಸ್ ತನ್ನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಿದೆ. ತನ್ನ ಟಿಕೆಟ್ ದರಗಳ ಮೇಲೆ ಆಫರ್ ನೀಡಿರುವ ಜೆಟ್ ಏರ್ವೇಸ್  ಕೆಲವೊಂದು ರೂಟ್’ಗಳಿಗೆ 1,170 ರು. ಆರಂಭಿಕ ದರವನ್ನು ನಿಗದಿ ಮಾಡಿದೆ. ಈ ಬಗ್ಗೆ ಇದರ ವೆಬ್ ಸೈಟ್’ನಲ್ಲಿ ಮಾಹಿತಿಯನ್ನು ನೀಡಿದೆ.

ದಿಲ್ಲಿ : ಜೆಟ್ ಏರ್ವೇಸ್ ತನ್ನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಿದೆ. ತನ್ನ ಟಿಕೆಟ್ ದರಗಳ ಮೇಲೆ ಆಫರ್ ನೀಡಿರುವ ಜೆಟ್ ಏರ್ವೇಸ್  ಕೆಲವೊಂದು ರೂಟ್’ಗಳಿಗೆ 1,170 ರು. ಆರಂಭಿಕ ದರವನ್ನು ನಿಗದಿ ಮಾಡಿದೆ. ಈ ಬಗ್ಗೆ ಇದರ ವೆಬ್ ಸೈಟ್’ನಲ್ಲಿ ಮಾಹಿತಿಯನ್ನು ನೀಡಿದೆ.

ಮಾರ್ಚ್ 25ರಿಂದ  ಹೊಸ ಆಫರ್ ಮೂಲಕ ಪ್ರಯಾಣ ಮಾಡಬಹುದಾಗಿದೆ.  ದೇಶದ ವಿವಿಧ ಪ್ರದೇಶಗಳಿಗೆ ವಿಶಾಲವಾದ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಈ ಹೊಸ ಆಫರ್ ನೀಡಲಾಗಿದೆ ಎಂದು  ಜೆಟ್ ಏರ್ವೇಸ್ ಸಂಸ್ಥೆಯು ಹೇಳಿದೆ.

ಈ ಹೊಸ ಆಫರ್’ನಲ್ಲಿ ಆರಂಭಿಕ ಬೆಲೆಯು 1170 ರು. ಆಗಿದೆ. ಈ ದರದಲ್ಲಿ ಬಾಗ್ದೋಗ್ರಾದಿಂದ - ಗುವಾಹಟಿಗೆ ಪ್ರಯಾಣ ಮಾಡಬಹುದಾಗಿದೆ. ಅತ್ಯಂತ ಹೆಚ್ಚಿನ ಪ್ರಮಾಣದ ಡಿಸ್ಕೌಂಟ್ ಕೂಡ ದೊರೆಯುತ್ತಿದೆ.

ಇನ್ನು  ಇಂಪಾಲದಿಂದ – ಗುವಾಹಟಿಗೆ ಪ್ರಯಾಣಿಸಲು 1700 ರು. ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಇಂದೋರ್’ಗೆ ಪ್ರಯಾಣ ಮಾಡಲು 2601 ರು. ನಿಗದಿ ಮಾಡಲಾಗಿದೆ.

ಈ ಹೊಸ ಆಫರ್’ನಲ್ಲಿ ಯಾವುದೇ ರೀತಿಯಾದ ರಿಸ್ಟ್ರಿಕ್’ಶನ್’ಗಳನ್ನೂ ಹೇರಲಾಗಿಲ್ಲ.  ಸೆಲೆಕ್ಟೆಡ್ ಬುಕಿಂಗ್ ಕ್ಲಾಸ್’ಗಳಿಗೆ ಹೊಸ ಆಫರ್ ಅನ್ವಯವಾಗುತ್ತದೆ.  ಟಿಕೆಟ್’ ವ್ಯಾಲಿಡಿಟಿ 12 ತಿಂಗಳಿನದ್ದಾಗಿರುತ್ತದೆ.

loader