7 ಸಿಬ್ಬಂದಿಯನ್ನು ಒಳಗೊಂಡು 154 ಪ್ರಯಾಣಿಕರಿದ್ದ ವಿಮಾನವು ಗೋವಾದಿಂದ ಮುಂಬೈಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಸ್ಕಿಡ್ ಆಗಿ ರನ್ ವೇನಿಂದ ಹೊರ ನುಗ್ಗಿದೆ.

ಪಣಜಿ(ಡಿ.27): ಜೆಟ್ ಏರ್ವೇಸ್ ವಿಮಾನವು ರನ್ ವೇನಿಂದ ಹೊರ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಗೋವಾದ ದಾಬೋಲಿಮ್ ಏರ್'ಪೋರ್ಟ್'ನಲ್ಲಿ ನಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. 7 ಸಿಬ್ಬಂದಿಯನ್ನು ಒಳಗೊಂಡು 154 ಪ್ರಯಾಣಿಕರಿದ್ದ ವಿಮಾನವು ಗೋವಾದಿಂದ ಮುಂಬೈಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಸ್ಕಿಡ್ ಆಗಿ ರನ್ ವೇನಿಂದ ಹೊರ ನುಗ್ಗಿದೆ. ತುರ್ತು ಸ್ಲೈಡ್'ಗಳ ಮೂಲಕ ಏರ್'ಪೋರ್ಟ್ ಸಿಬ್ಬಂದಿ ಎಲ್ಲ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಹಿನ್ನಲೆ ಮಧ್ಯಾಹ್ನ 12.30ರವರೆಗೆ ಏರ್'ಪೋರ್ಟ್ ಬಂದ್ ಮಾಡಲಾಗಿದೆ.