ವದೆಹಲಿ : ಖಾಸಗಿ ವಲಯದ ವಿಮಾನ ಯಾನ ಸೇವೆ ಜೆಟ್ ಏರ್’ವೇಸ್ ತನ್ನ ಗ್ರಾಹಕರಿಗೆ ವಿಶೇಷ ಆಫರ್’ಗಳನ್ನು ನೀಡಿದೆ.  ಜೆಟ್ ಏರ್’ವೇಸ್ ಮೊದಲ ಟಿಕೆಟ್ ಬುಕಿಂಗ್ ಮೇಲೆ ಶೇ.20ರಷ್ಟು ಡಿಸ್ಕೌಂಟ್ ನೀಡುವುದಾಗಿ ಹೇಳಿದೆ. ಇನ್ನು ಎಕಾನಮಿ ಕ್ಲಾಸ್’ನ ದೇಶೀಯ ವಲಯದ ಪ್ರಯಾಣಕ್ಕೆ ಶೆ10ರಷ್ಟು ಆಫರ್ ನೀಡುವುದಾಗಿ ಘೋಷಿಸುತ್ತಿದೆ.

ಇನ್ನು ಅಲ್ಲದೇ ಮೊದಲ ಅಂತಾರಾಷ್ಟ್ರೀಯ ಪ್ರಯಾಣದ ಟಿಕೆಟ್ ಮೇಲೂ ಕೂಡ ಶೇ.30ರಷ್ಟು ಆಫರ್ ನೀಡುವುದಾಗಿ ಹೇಳಿದೆ.  ಈ ಆಫರ್’ಗಾಗಿ  ಜೆಟ್ ಏರ್’ವೇಸ್ 45 ನಗರಗಳನ್ನು ಆಯ್ಕೆ ಮಾಡಿಕೊಂಡಿದೆ. ಸೆಪ್ಟೆಂಬರ್ 30ರವರೆಗಿನ ಟಿಕೆಟ್ ಬುಕಿಂಗ್’ಗೆ  ಮಾತ್ರ  ಈ ಉತ್ತಮ ಆಫರ್ ಲಭ್ಯವಾಗುತ್ತದೆ.