ನ್ಯೂಯಾರ್ಕ್ (ಡಿ. 03): ತಮ್ಮ ಕಂಪನಿ ನೂರಾರು ವರ್ಷ ನಡೆಯಲಿದೆ ಎಂದು ಹೇಳುವ ದೊಡ್ಡ ದೊಡ್ಡ ಉದ್ಯಮಿಗಳ ನಡುವೆ, ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಜೆಫ್‌ ಬೆಜೋಸ್‌, ತಮ್ಮ ನೇತೃತ್ವದ ಅಮೆಜಾನ್‌ ಕಂಪನಿ ಕೂಡಾ ಒಂದಲ್ಲಿ ಒಂದು ದಿನ ಮುಳುಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ, ‘ಇತ್ತೀಚೆಗೆ ಹಲವು ಅತಿದೊಡ್ಡ ಚಿಲ್ಲರೆ ಮಳಿಗೆಗಳು ದಿವಾಳಿಯಾದವು. ಇದರಿಂದ ನೀವು ಕಲಿತ ಪಾಠವೇನು ಎಂದು ಅಮೆಜಾನ್‌ ನೌಕರನೋರ್ವ ಬೆಜೋಸ್‌ ಅವರಿಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬೆಜೋಸ್‌, ‘ಅಮೆಜಾನ್‌ ನಷ್ಟಅನುಭವಿಸಲು ನೀವು ತಿಳಿದುಕೊಂಡಂತೆ ನಷ್ಟವಾಗದೇ ಇರುವಷ್ಟುದೊಡ್ಡ ಕಂಪನಿಯೇನಲ್ಲ. ನೀವು ಯಾವುದೇ ಬೃಹತ್‌ ಕಂಪನಿಗಳನ್ನು ನೋಡಿ. ಅವುಗಳು ನೂರಾರು ವರ್ಷ ಬಾಳಿದ ಉದಾಹರಣೆ ಇಲ್ಲ. ಇಂಥ ಕಂಪನಿಗಳ ಆಯುಷ್ಯ ಕೇವಲ 30 ವರ್ಷ ಮಾತ್ರ. ಹೀಗಾಗಿ ಒಂದಲ್ಲಾ ಒಂದು ದಿನ ಅಮೆಜಾನ್‌ ಕೂಡಾ ವಿಫಲವಾಗುತ್ತದೆ. ಅದು ಕೂಡಾ ಒಂದು ದಿನ ಮುಳುಗಿ ಹೋಗುತ್ತದೆ ಎಂದು ಹೇಳಿದ್ದಾರೆ.