ಬೆಂಗಳೂರು [ಜು.19] :  ಮದ್ಯಪಾನ ನಿಷೇಧಿಸಬೇಕೆಂದು ಒತ್ತಾಯಿಸಿ ಸಂಯುಕ್ತ ಜನತಾದಳ (ಜೆಡಿಯು) ‘ಮದ್ಯಪಾನ ತ್ಯಜಿಸಿ, ಕ್ಷೀರಪಾನ ಸೇವಿಸಿ’ ಎಂಬ ರಾಷ್ಟ್ರೀಯ ಜಾಗೃತಿ ಆಂದೋಲನವನ್ನು ಜು.20ರಂದು ಹಮ್ಮಿಕೊಂಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವರಾಮ್‌, ಜು.21ರಂದು ಬೆಳಗ್ಗೆ 11ಕ್ಕೆ ಪುರಭವನ ಬಳಿ ಆಂದೋಲನ ನಡೆಯಲಿದ್ದು, ಜೆಡಿಯು ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಸಂಜಯ್‌ಕುಮಾರ್‌ ನೇತೃತ್ವ ವಹಿಸಲಿದ್ದಾರೆ.

ಈಗಾಗಲೇ ಬಿಹಾರದಲ್ಲಿ ಜೆಡಿಯು ಸರ್ಕಾರ ಮದ್ಯಪಾನ ನಿಷೇಧಿಸಿದೆ. ಅದರಂತೆ ರಾಜ್ಯದಲ್ಲಿಯೂ ಮದ್ಯ ನಿಷೇಧಿಸಬೇಕಿದೆ. ಮದ್ಯಪಾನ ನಿಷೇಧ ಬೆಂಬಲಿಸುವ ಸಂಘ, ಸಂಸ್ಥೆಗಳು ಆಂದೋಲನದ ಜೊತೆ ಕೈಜೋಡಿಸಬೇಕೆಂದು ಅವರು ಕೋರಿದರು.