ಪಟನಾ[ಆ.27]: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರ ಜೆಡಿಯು ಪಕ್ಷದ ‘ಬಾಣ’ದ ಗುರುತು ಜಾರ್ಖಂಡ್‌, ಮಹಾರಾಷ್ಟ್ರದಲ್ಲಿ ಅದೇ ಪಕ್ಷಕ್ಕೆ ತಿರುಗುಬಾಣವಾಗಿದೆ. ಕಾರಣ ಜಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ಯಾವುದೇ ಚುನಾವಣೆಗೆ ಸ್ಪರ್ಧಿಸುವಾಗ ಪಕ್ಷದ ಚಿಹ್ನೆಯನ್ನು ಬಳಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

ಬಿಜೆಪಿಗೆ ಕೈಕೊಟ್ಟ ಜೆಡಿಯು, ಏಕಾಂಗಿ ಸ್ಪರ್ಧೆಗೆ ನಿರ್ಧಾರ!

ಮಹಾರಾಷ್ಟ್ರದ ಶಿವಸೇನೆ, ಜಾರ್ಖಂಡ್‌ನ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷಗಳ ಚಿಹ್ನೆಗಳೂ ಬಾಣ ಮತ್ತು ಬಿಲ್ಲಿನ ಗುರುತು ಹೊಂದಿವೆ. ಜೆಡಿಯು ಪಕ್ಷವೂ ಬಾಣದ ಗುರುತು ಹೊಂದಿರುವುದರಿಂದ ಮತದಾರರಲ್ಲಿ ವಿನಾಕಾರಣ ಗೊಂದಲ ಉಂಟಾಗುತ್ತದೆ. ಇದರಿಂದ ಜಾರ್ಖಂಡ್‌ನಲ್ಲಿ ಚುನಾವಣೆ ವೇಳೆ ಚಿಹ್ನೆ ಬಳಕೆ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಜೆಎಂಎಂ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

ಮುಯ್ಯಿಗೆ ಮುಯ್ಯಿ: ಕೇಂದ್ರದಲ್ಲಿ ಮೋದಿ ಮಾಡಿದ್ದನ್ನೇ ಬಿಹಾರದಲ್ಲಿ ಮಾಡಿದ ನಿತೀಶ್!

ಲೋಕಸಭೆ ಚುನಾವಣೆ ವೇಳೆ ಶಿವಸೇನೆ, ಜೆಎಂಎಂ ಪಕ್ಷಗಳು ಬಿಹಾರದಲ್ಲಿ ತಮ್ಮ ಚಿಹ್ನೆಯಡಿ ಸ್ಪರ್ಧಿಸದಂತೆ ಜೆಡಿಯು ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಆಯೋಗ ಈ ಎರಡೂ ಪಕ್ಷಗಳಿಗೂ ಚುನಾವಣೆ ವೇಳೆ ನಿರ್ಬಂಧ ಹೇರಿತ್ತು. ಈಗ ಜೆಡಿಯುಗೂ ಬಿಹಾರ, ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಪರ್ಧೆಗೆ ನಿಷೇಧ ಹೇರಿದೆ.