ಸಚಿವ ಅನಂತ್ ಕುಮಾರ್ ಹೆಗಡೆಗೆ ಜೆಡಿಎಸ್ ಕಾರ್ಯಕರ್ತರಿಂದ ವಿಶೇಷ ಗಿಫ್ಟ್

JDS Workers Send Special Gift To Ananth Kumar Hegde
Highlights

ಜೆಡಿಎಸ್ ಪುಟಗೋಸಿ ಪಕ್ಷ’ ಎಂದು ವ್ಯಂಗ್ಯವಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಸೋಮವಾರ ಸಚಿವರ ಕಾರವಾರ ನಿವಾಸಕ್ಕೆ ಅಂಚೆ ಮೂಲಕ ಪುಟಗೋಸಿಗಳನ್ನು ರವಾನಿಸಿದ್ದಾರೆ. 

ಮಂಡ್ಯ (ಜೂ.05): ‘ಜೆಡಿಎಸ್ ಪುಟಗೋಸಿ ಪಕ್ಷ’ ಎಂದು ವ್ಯಂಗ್ಯವಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಸೋಮವಾರ ಸಚಿವರ ಕಾರವಾರ ನಿವಾಸಕ್ಕೆ ಅಂಚೆ ಮೂಲಕ ಪುಟಗೋಸಿಗಳನ್ನು ರವಾನಿಸಿದ್ದಾರೆ. 

ನಗರದ ಜಿಲ್ಲಾ ಅಂಚೆ ಕಚೇರಿ ಮುಂಭಾಗ ಜಮಾಯಿಸಿದ ಜೆಡಿಎಸ್ ಅಭಿಮಾನಿಗಳು, ಪುಟಗೋಸಿಗಳನ್ನು ಪ್ರದರ್ಶಿಸಿ ಕೇಂದ್ರ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಜೆಡಿಎಸ್ ಪಕ್ಷವನ್ನು ಪುಟಗೋಸಿ ಎನ್ನುವ ಮೂಲಕ ಆ ಪಕ್ಷದ 37 ಶಾಸಕರನ್ನು ಆಯ್ಕೆ ಮಾಡಿರುವ ಜನರಿಗೆ ಅವಮಾನಿಸಿದ್ದಾರೆ. 

ಪುಟಗೋಸಿ ಇರುವುದೇಕೆ ಎಂಬುದನ್ನು ಸಚಿವರು ಮರೆತಿರುವಂತಿದೆ. ಪುಟಗೋಸಿ ಇರುವುದು ಮಾನ ಉಳಿಸಿಕೊಳ್ಳಲು. ಆದರೆ, ಅದರ ಮೌಲ್ಯ ಗೊತ್ತಿಲ್ಲದ ಸಚಿವರು ಪುಟಗೋಸಿ ಬಳಸುತ್ತಿರುವಂತೆ ಕಾಣುತ್ತಿಲ್ಲ. ಆದ್ದರಿಂದ ಅವರಿಗೆ ಪುಟಗೋಸಿಗಳನ್ನು ಕಳಿಸುತ್ತಿದ್ದೇವೆ ಎಂದರು.

loader