ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದ್ದರೂ, ಮಂಡ್ಯ ಪೊಲೀಸ್ ಇಲಾಖೆ ಏನ್ ಮಾಡ್ತಿದೆ ಎಂದು ಜೆಡಿಎಸ್ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಹತ್ಯೆ ಸರಣಿ ಮುಂದುವರೆದಂತೆ ಕಾಣುತ್ತಿದೆ. ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರ ಬರ್ಬರ ಹತ್ಯೆಯಾಗಿದೆ. ಕೊಲೆಯಾದ ಹರೀಶ್ ಅಲಿಯಾಸ್ ಗುಂಡ ಕೆಆರ್ ಪೇಟೆ ತಾಲೂಕಿನ ಪ್ರಮುಖ ಜೆಡಿಎಸ್ ಕಾರ್ಯಕರ್ತನಾಗಿದ್ದ. ಆತನ ಸಾವಿನೊಂದಿಗೆ 9 ದಿನದಲ್ಲಿ ಜಿಲ್ಲೆಯಲ್ಲಿ 4 ಜೆಡಿಎಸ್ ಕಾರ್ಯಕರ್ತರ ಹತ್ಯೆಯಾದಂತಾಗಿದೆ.
ಹಿಂದಿನ ಘಟನೆಗಳು:
* ಡಿ.24ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆನಮನಹಳ್ಳಿ ಗ್ರಾಮದಲ್ಲಿ ಕೇಬಲ್ ಕುಮಾರ್ ಎಂಬ ಜೆಡಿಎಸ್ ಕಾರ್ಯಕರ್ತನ ಹತ್ಯೆಯಾಗಿತ್ತು,
* ಡಿ.26ರಂದು ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಮುತ್ತುರಾಜು ಮತ್ತು ನಂದೀಶ್ ಎಂಬ ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಹತ್ಯೆಗೈಯಲಾಗಿತ್ತು.
ಈಗ ಒಂಬತ್ತು ದಿನಗಳ ಅಂತರದಲ್ಲಿ ಮಂಡ್ಯದಲ್ಲಿ ನಾಲ್ವರು ಜೆಡಿಎಸ್ ಕಾರ್ಯಕರ್ತರ ಹತ್ಯೆ ನಡೆದಿರೋದು ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದ್ದರೂ, ಮಂಡ್ಯ ಪೊಲೀಸ್ ಇಲಾಖೆ ಏನ್ ಮಾಡ್ತಿದೆ ಎಂದು ಜೆಡಿಎಸ್ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
