ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಜಯಕ್ಕೆ ಕಾರ್ಯಕ್ರಮ ರೂಪಿಸಲು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಬೆಂಗಳೂರು (ಡಿ.27): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಜಯಕ್ಕೆ ಕಾರ್ಯಕ್ರಮ ರೂಪಿಸಲು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈ ವಿಷಯ ತಿಳಿಸಿದರು. ಜೆಡಿಎಸ್ ಪಕ್ಷದ 12 ವಿಧಾನಪರಿಷತ್ ಸದಸ್ಯರು ಇದ್ದಾರೆ.
ವಿಧಾನ ಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣವಾಗುವವರೆಗೆ ಅಂದರೆ ಹೊಸ ವರ್ಷ ಜ.1ರಿಂದ ಸುಮಾರು ನಾಲ್ಕು ತಿಂಗಳ ಕಾಲ ಈ 12 ಸದಸ್ಯರು ಉಸ್ತುವಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಲು ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸುವ ಹಾಗೂ ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಕಾಂತರಾಜು ಮತ್ತು ಎಸ್.ಎಂ.ಆಘಾ, ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗೆ ಅಪ್ಪಾಜಿ
ಗೌಡ ಮತ್ತು ಮನೋಹರ್, ಬಳ್ಳಾರಿ ಹಾಗೂ ಕೊಪ್ಪಳಕ್ಕೆ ಶ್ರೀಕಂಠೇಗೌಡ, ಬೆಳಗಾವಿಗೆ ಚೌಡ ರೆಡ್ಡಿ ಹಾಗೂ ನಾರಾಯಣಸ್ವಾಮಿ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿಗೆ ರಮೇಶ್‌ಬಾಬು, ಹುಬ್ಬಳಿ-ಧಾರವಾಡ, ಗದಗ, ಬೆಳಗಾ ವಿಯ ಕೆಲ ಭಾಗಗಳಿಗೆ ಬಸವರಾಜ ಹೊರಟ್ಟಿ, ರಾಯಚೂರು ಜಿಲ್ಲೆಗೆ ಟಿ.ಎ. ಶರವಣ ಮತ್ತು ಅವರಿಗೆ ಕೊಟ್ಟಿದ್ದೇವೆ. ಉತ್ತರ ಕನ್ನಡಕ್ಕೆ ಮರಿತಿಬ್ಬೇಗೌಡ ವಹಿಸಲಾಗಿದೆ ಎಂದು ಹೇಳಿದರು.
