ಪ್ರಜ್ವಲ್ ಸ್ಪರ್ಧೆ: ದೇವೇಗೌಡರ ಲೆಕ್ಕಾಚಾರವೇನು?

First Published 7, Apr 2018, 2:54 PM IST
JDS Supremo Deve Gowda Opinion About Prajwal Contest
Highlights

ಚಿಕ್ಕಬಳ್ಳಾಪುರದ  ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಇಂದು ಜೆಡಿಎಸ್ ಸೇರಲಿದ್ದಾರೆ.  ಇಂದು ಕಾನೂನು ಘಟಕದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದೇನೆ.  ಪಕ್ಷದ ಕಾನೂನು ಘಟಕ ತುಂಬಾ ಆಕ್ಟೀವ್ ಆಗಿದೆ ಎಂದು ದೇವೇಗೌಡರು ಹೇಳಿದ್ದಾರೆ. 

ಬೆಂಗಳೂರು (ಏ. 07): ಚಿಕ್ಕಬಳ್ಳಾಪುರದ  ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಇಂದು ಜೆಡಿಎಸ್ ಸೇರಲಿದ್ದಾರೆ.  ಇಂದು ಕಾನೂನು ಘಟಕದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದೇನೆ.  ಪಕ್ಷದ ಕಾನೂನು ಘಟಕ ತುಂಬಾ ಆಕ್ಟೀವ್ ಆಗಿದೆ ಎಂದು ದೇವೇಗೌಡರು ಹೇಳಿದ್ದಾರೆ. 

ಪ್ರಜ್ವಲ್ ರೇವಣ್ಣ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,  ಕಳೆದ ಆರೇಳು ವರ್ಷಗಳ ಹಿಂದೆ ಬಿಇ ಸಿವಿಲ್ ಮುಗಿಸಿದಾಗ ನಾನು ಎಂಟೆಕ್ ಮಾಡಿಕೊಂಡು ಬಾ ಎಂದೆ.  ಆದರೆ ಆತ ತಾತನ ಎಲೆಕ್ಷನ್ ಮುಗಿಸಿಕೊಂಡು ‌ಹೋಗ್ತೀನಿ‌ ಅಂದ ಅಂದಿನಿಂದ‌ ಸತತವಾಗಿ‌ ಕೆಲಸ ಮಾಡ್ತಿದ್ದಾನೆ.  ಕೆಲವು ಆತನ ಸ್ನೇಹಿತರು ಆಸೆ ಹುಟ್ಟಿಸಿದ್ದಾರೆ.  ಆರ್.‌ಆರ್. ನಗರಕ್ಕೆ ಅವನೇ ನಿಲ್ಲಬೇಕು ಎಂದು ಆತನ ಅಭಿಮಾನಿಗಳು ಕೇಳ್ತಿದ್ದಾರೆ.  ಅವರೆಲ್ಲ ಹಾಸನದ  ಅಭಿಮಾನಿಗಳು. ನಾನೇ ಬೇಡ ಹೋಗ್ರಪ್ಪ ಅಂದೆ ಎಂದು ಹೇಳಿದ್ದಾರೆ. 

ಪ್ರಜ್ವಲ್’ನನ್ನು  ಪಾರ್ಲಿಮೆಂಟ್ ಗೆ ಕಳಿಸಲು ತೀರ್ಮಾನ ಮಾಡಿದ್ದೇನೆ.  ದೆಹಲಿಗೆ ಹೋದರೆ ಅವನಿಗೆ ಒಳ್ಳೆ‌ ಎಕ್ಸ್ ಪೋಷರ್ ಸಿಗುತ್ತೆ.  ಆದರೆ ಅವನು ಅಸೆಂಬ್ಲಿಯಲ್ಲಿ ಕೆಲಸ ಮಾಡಿ ಅನುಭವ ಪಡೆದು ಪಾರ್ಲಿಮೆಂಟ್ ಗೆ ಹೋಗ್ತೀನಿ ಅಂತಾನೆ.  ನಾನು ಅವನಿಗೆ ಕನ್ವಿನ್ಸ್ ಮಾಡ್ತೀನಿ.   ಕುಮಾರಸ್ವಾಮಿ ಹಾಗೂ ರೇವಣ್ಣ ಇಬ್ಬರೂ‌ ಇಲ್ಲಿ ಅಸೆಂಬ್ಲಿಯಲ್ಲಿರುತ್ತಾರೆ, ಹೀಗಿರುವಾಗ ಪ್ರಜ್ವಲ್ ಕೂಡ ಇಲ್ಲಿಯೇ ಇರೋದು ಅಗತ್ಯ ಇಲ್ಲ, ಆತ ದೆಹಲಿಯ ಪಾರ್ಲಿಮೆಂಟ್ ಗೆ ಹೋಗಲಿ.  ಅತ್ತ ಯುಪಿಎ, ಇತ್ತ ಎನ್.ಡಿ.ಎ ನಾನು ಮಧ್ಯ ಪಾರ್ಲಿಮೆಂಟ್ ಗೆ ಹೋಗಿ ಏನು ಮಾಡಲಿ? ಈಗ ಎಲೆಕ್ಟ್ ಆಗಿ ಹೋದರೂ ಅಲ್ಲಿ ಮಾತನಾಡಲು ಆಗಲ್ಲ.  ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಯಾರಿಗೂ ಮೆಜಾರಿಟಿ ಬರಲ್ಲ.  ಯಾವುದೇ ರಾಷ್ಟ್ರೀಯ ಪಕ್ಷ ಉಳಿದವರ ಬೆಂಬಲ‌ ಪಡೆದೇ ಸರ್ಕಾರ ರಚಿಸಬೇಕಾಗುತ್ತೆ ಎಂದಿದ್ದಾರೆ. 

ನನ್ನ ವಯಸ್ಸು ಕೂಡ‌ ನಾನು ಮುಂದೆ ಸ್ಪರ್ಧೆ ಮಾಡದಿರಲು‌ ಕಾರಣ.  ಈಗಾಗಲೇ  26  ವರ್ಷಗಳಿಂದ ಪಾರ್ಲಿಮೆಂಟ್ ನಲ್ಲಿದ್ದೇನೆ ಎಂದಿದ್ದಾರೆ. 

loader