ಹೈಕೋರ್ಟ್ ಆದೇಶ ಬರುತ್ತಿದಂತೆ ಸಮಾಧಾನಗೊಂಡಿರುವ ಬಂಡಾಯ ಶಾಸಕರು ರಾಜ್ಯಸಭಾ ಚುನಾವಣೆ ಮತದಾನದ ಬಳಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.

ಬೆಂಗಳೂರು(ಮಾ.22): ಜೆಡಿಎಸ್'ನ 7 ಬಂಡಾಯ ಶಾಸಕರು ವಿಪ್ ಉಲ್ಲಂಘನೆ ಪ್ರಕರಣದ ವಿಚಾರಣೆ ಏಪ್ರಿಲ್ 2ಕ್ಕೆ ನಿಗದಿಯಾಗಿದ್ದು ಶಾಸಕತ್ವದ ಅನರ್ಹತೆಯ ತೂಗುಗತ್ತಿಯಿಂದ ತಪ್ಪಿಸಿಕೊಂಡಿದ್ದಾರೆ.

ಹೈಕೋರ್ಟ್ ಆದೇಶ ಬರುತ್ತಿದಂತೆ ಸಮಾಧಾನಗೊಂಡಿರುವ ಬಂಡಾಯ ಶಾಸಕರು ರಾಜ್ಯಸಭಾ ಚುನಾವಣೆ ಮತದಾನದ ಬಳಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ. ರಾಜೀನಾಮೆ ನೀಡಿದ ನಂತರ ಮೈಸೂರಿನಲ್ಲಿ ಮಾರ್ಚ್ 25ರಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​​​ಗೆ ಸೇರ್ಪಡೆಯಾಗಲಿದ್ದಾರೆ.

ಮತದಾನವಾದ ಬಳಿಕ ಸ್ಪೀಕರ್​​ಗೆ ರಾಜೀನಾಮೆ ಕೊಡಲು ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಸಿಎಂ ಸೂಚನೆಯಂತೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.