ಶಿವಮೊಗ್ಗ (ನ.27): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ಬಗ್ಗೆ ಆಕ್ರೋಶವಿದೆ ಆದರೆ ಆಕ್ರೋಶ ದಿವಸದ ಹೆಸರಿನಲ್ಲಿ ನಾಳೆ ನಡೆಯಲಿರುವ ಭಾರತ್ ಬಂದ್’ಗೆ ಜೆಡಿಎಸ್ ಬೆಂಬಲವಿಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಹೇಳಿದ್ದಾರೆ.

ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ನೋಟು ರದ್ದುಪಡಿಸಿರುವುದು  ಸರಿಯಲ್ಲ  ಜನರಿಗೆ ಆದ ತೊಂದರೆ ಬಗ್ಗೆ ಜೆಡಿಎಸ್​ ಪ್ರತಿಭಟನೆ ಮಾಡುವುದು ಎಂದು ಅವರು ಹೇಳಿದ್ದಾರೆ.

ನೋಟು ಅಮಾನ್ಯದ ವಿಷಯವಾಗಿ ಸಾರ್ವಜನಿಕರಿಗೆ ಆಗುವ ಅನಾನುಕೂಲದ ಬಗ್ಗೆ ಇಂದೇ ಪ್ರತಿಭಟನೆ ನಡೆಸಲಿದ್ದೇವೆ. ಕಾಂಗ್ರೆಸ್ ಜೊತೆ ಸೇರಿ ಆಕ್ರೋಶ ದಿವಸ್ ಗೆ ಬೆಂಬಲ ಇಲ್ಲವೆಂದು ದೇವೆಗೌಡರು ಹೇಳಿದ್ದಾರೆ.