ಅಂಬಿಡೆಂಟ್ ಅವ್ಯವಹಾರ ಡೀಲ್ ಪ್ರಕರಣಕ್ಕೆ ಸಂಬಂಧಿದಿಂತೆ 4ನೇ ಜೈಲುವಾಸ ಅನುಭವಿಸಿ ಬೇಲ್ ಮೇಲೆ ಹೊರಬಂದ ಜನಾದರ್ದನ ರೆಡ್ಡಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೆಂಡಕಾರಿದ್ದರು. ಇದೀಗ ರೆಡ್ಡಿ ವಿರುದ್ಧ ಜೆಡಿಎಸ್ ನಾಯಕರು ಮುಗಿಬಿದ್ದಿದ್ದಾರೆ.

ಬೆಂಗಳೂರು, [ನ.15]: ‘ಭೂತದ ಬಾಯಲ್ಲಿ ಭಗವದ್ಗೀತೆ’ ಹೇಳಿದಂತೆ ಅಂತ ರೆಡ್ಡಿ ಪುಣ್ಯಕೋಟಿ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಶರವಣ ಶರವಣ ವ್ಯಂಗ್ಯವಾಡಿದ್ದಾರೆ. 

Add Asianetnews Kannada as a Preferred SourcegooglePreferred

ಇಂದು [ಗುರುವಾರ] ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರೆಡ್ಡಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರೆಡ್ಡಿ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶರವಣ ಕಿಡಿ ಕಾರಿದರು. 

12 ವರ್ಷದ ಸೇಡು ತೀರಿಸಿಕೊಂಡ್ರು ಕುಮಾರಸ್ವಾಮಿ: ಜೈಲಿನಿಂದ ಹೊರಬಂದ ರೆಡ್ಡಿ ಕಿಡಿ

ರೆಡ್ಡಿಯವರೇ ನೀವು ಭೂತಾಯಿಯ ಒಡಲನ್ನು ಒಡೆದು ಸಂಪಾದನೆ ಮಾಡಿದ್ದಿರಿ. ಜೈಲಿನಲ್ಲಿ ಮಹಾಭಾರತ ಓದಿದರೆ ಸಾಲದು, ಅದನ್ನು ಕೆಲಸದಲ್ಲಿ ತೋರಿಸಬೇಕು ಅಂತ ಗರಂ ಆಗಿಯೇ ಸಲಹೆ ನೀಡಿದರು.

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜನಾರ್ದನ ರೆಡ್ಡಿ ರೌದ್ರಾವತಾರ..!

ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ ಅಂತ ರಾಜ್ಯ ಜೆಡಿಎಸ್ ನಾಯಕರು ಗಾಲಿ ಜನಾರ್ದನ ರೆಡ್ಡಿಗೆ ಎಚ್ಚರಿಕೆ ನೀಡಿದರು.

ಜನಾರ್ದನ ರೆಡ್ಡಿ ನಿನ್ನೆ [ಬುಧವಾರ] ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿಸಿಬಿ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು.