Asianet Suvarna News Asianet Suvarna News

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜನಾರ್ದನ ರೆಡ್ಡಿ ರೌದ್ರಾವತಾರ..!

ಬೆಂಗಳೂರು ಜೈಲಿನಿಂದ ಇಂದು [ಬುಧವಾರ] ಹೊರಬರುತ್ತಿದ್ದಂತೆಯೇ ಗಾಲಿ ಜನಾರ್ದನ ರೆಡ್ಡಿ ರೌದ್ರಾವತಾರ ತಾಳಿದ್ದು, ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಮನಬಂದಂತೆ ಹರಿಹಾಯ್ದಿದ್ದಾರೆ. 

Janardhan Reddy fumes at CM Kumaraswamy after release from Central Jail
Author
Bengaluru, First Published Nov 14, 2018, 9:05 PM IST

ಬೆಂಗಳೂರು, [ನ.14]  ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು [ಬುಧವಾರ] ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಸಿಎಂ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಾನು ಸುಮ್ಮನೆ ಕೂತ್ರೂ ನನ್ನನ್ನ ಬಿಡ್ತಿಲ್ಲ. ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಕ್ಕೆ ಅವರಿಗೆ ದೇವರು ಶಿಕ್ಷೆ ಕೊಡ್ತಾನೆ. ಕುಮಾರಸ್ವಾಮಿ ರಾಕ್ಷಸ ಆನಂದ ಅನುಭವಿಸುತ್ತಿದ್ದಾರೆ.  ಅಲೋಕ್ ಕುಮಾರ್, ಗಿರೀಶ್ ನಮಗೆ ಅಗತ್ಯವಿಲ್ಲ. ಅವರು ಕುಮಾರಸ್ವಾಮಿ ಹೇಳಿದಂತೆ ಮಾಡ್ತಾರೆ ಎಂದು ಹೆಚ್​ಡಿಕೆ ವಿರುದ್ಧ ಹರಿಹಾಯ್ದರು.

12 ವರ್ಷದ ಸೇಡು ತೀರಿಸಿಕೊಂಡ್ರು ಕುಮಾರಸ್ವಾಮಿ: ಜೈಲಿನಿಂದ ಹೊರಬಂದ ರೆಡ್ಡಿ ಕಿಡಿ

ನನ್ನನ್ನ ಬೆಂಗಳೂರಿನಿಂದ ಓಡಿಸ್ಬೇಕು ಅಂಥ ಪ್ಲಾನ್ ಮಾಡಿದ್ರು. ಸಿಸಿಬಿ ನನ್ನ ತನಿಖೆ ನಡೆಸುವಾಗ ಅವರಿಗೆ ಸಾಕಷ್ಟು ಒತ್ತಡ ಇತ್ತು. ಪದೇ ಪದೇ ಅವರಿಗೆ ಫೋನ್ ಬರುತ್ತಾ ಇತ್ತು. ನನ್ನನ್ನ ಒಂದು ದಿನಾವಾದ್ರೂ ಜೈಲಿಗೆ ಕಳಿಸ್ಬೇಕು ಅಂಥ ಪ್ಲಾನ್ ಮಾಡಿದ್ರು. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ನನ್ನ ಜೀವಕ್ಕೆ ಅಪಾಯವಿದೆ. ನಾನು ಸ್ವತಃ ಕುಮಾರಸ್ವಾಮಿಗೆ ಹೇಳಿದ್ದೆ. ಆದ್ರೆ ಇದುವರೆಗೂ ಯಾವುದೇ ಭದ್ರತೆ ಒದಗಿಸಿಲ್ಲ. ನನ್ನ ಜೀವಕ್ಕೆ ಅಪಾಯ ಆದ್ರೆ ಯಾರೂ ಹೊಣೆ? ನನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಬದುಕೋಕೆ ಬಿಡ್ತಿಲ್ಲ. 

ಪದೇ ಪದೇ ನನ್ನ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಈ ರಾಜ್ಯದಲ್ಲಿ ನನ್ನ ಪತ್ರಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ನಾನು ಎಲ್ಲೂ ನಾಪತ್ತೆಯಾಗಿರಲಿಲ್ಲ . ಸಿಸಿಬಿ ನೋಟಿಸ್ ನೀಡಿದ ಮೇಲೆ ಹಾಜರಾಗೋಣ ಅನ್ಕೊಂಡಿದ್ದೆ. ನಾನು ಮೊಳಕಾಲ್ಮೂರಿನಲ್ಲೇ ಇದ್ದೆ, ಆಮೇಲೆ ಬೆಂಗಳೂರು ಬಂದಿದ್ದೆ.

 ಸಿಸಿಬಿ ಆಫೀಸರುಗಳು ನನ್ನನ್ನು ತುಂಬಾ ಹೀನಾಯವಾಗಿ ನಡ್ಕೊಂಡ್ರು. ನನಗೆ ಈ ಮುಂಚೆನೇ ಆಫೀಸರ್ ಒಬ್ಬ ಹೇಳಿದ್ರು ಸೇಫ್ ಆಗಿರಿ ಅಂಥಾ. ಆದ್ರೆ ನಾನು ಏನೂ ತಪ್ಪು ಮಾಡಿಲ್ಲ, ಹಾಗಾಗಿ ಎಲ್ಲೂ ಹೋಗಿಲ್ಲ ಎಂದರು.

Follow Us:
Download App:
  • android
  • ios