ಜೆಡಿಎಸ್'ನ ವಿಧಾನಪರಿಷತ್ ಸದಸ್ಯ ನಿಧನ

JDS MLC Afsar agha no more
Highlights

ರಾಮನಗರದ ದೊಡ್ಡಮಸೀದಿಯ ನಿವಾಸಿಯಾಗಿದ್ದ ಅಪ್ಸರ್ ಆಗಾ  ಈ ಹಿಂದೆ ನಗರಸಭಾ ಸದಸ್ಯರಾಗಿದ್ದರು. 2012ರಲ್ಲಿ ಜೆಡಿಎಸ್'ನಿಂದ ವಿದಾನ ಪರಿಷತ್ ಸದಸ್ಯರಾಗಿದ್ದರು. 

ಬೆಂಗಳೂರು[ಜೂ.09]: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೆಡಿಎಸ್'ನ ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಗಾ  ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣದಿಂದ ಕೆಲವು ದಿನಗಳ ಹಿಂದೆ ನಗರದ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ರಾಮನಗರದ ದೊಡ್ಡಮಸೀದಿಯ ನಿವಸಿಯಾಗಿದ್ದ ಅವರು ಈ ಹಿಂದೆ ನಗರಸಭಾ ಸದಸ್ಯರಾಗಿದ್ದರು.  2012ರಲ್ಲಿ ಜೆಡಿಎಸ್'ನಿಂದ ವಿದಾನ ಪರಿಷತ್ ಸದಸ್ಯರಾಗಿದ್ದರು. 

ಇದೇ ತಿಂಗಳ ಅಂತ್ಯಕ್ಕೆ ಅವರ ಸದಸ್ಯತ್ವ ಅವಧಿ ಮುಕ್ತಾಯವಾಗುತ್ತಿತ್ತು. ಮಧ್ಯಾಹ್ನ 3 ಗಂಟೆಗೆ ರಾಮನಗರದಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

loader