ಕೇವಲ 37 ಶಾಸಕರನ್ನು ಹೊಂದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸುತ್ತಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಉಭಯ ಪಾಳಯದಲ್ಲಿಯೂ ಸಂಪುಟ ಸಂಟಕ ಆರಂಭವಾಗಿದೆ. ಖುದ್ದು ಜೆಡಿಎಸ್ ಶಾಸಕರಲ್ಲಿಯೂ ಅಸಮಾಧಾನ ಸ್ಫೋಟಗೊಂಡಿದೆ.

ಬೆಂಗಳೂರು: ಕೇವಲ 37 ಶಾಸಕರನ್ನು ಹೊಂದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸುತ್ತಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಉಭಯ ಪಾಳಯದಲ್ಲಿಯೂ ಸಂಪುಟ ಸಂಟಕ ಆರಂಭವಾಗಿದೆ. ಖುದ್ದು ಜೆಡಿಎಸ್ ಶಾಸಕರಲ್ಲಿಯೂ ಅಸಮಾಧಾನ ಸ್ಫೋಟಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕರು ತಂಗಿದ್ದಾರೆ. ಆದರೆ, ಇವರನ್ನು ನಾಯಕರು ಕರೆದೊಯ್ಯಲು ಬಾರದ ಹಿನ್ನೆಲೆಯಲ್ಲಿ ಮುನಿಸು ವ್ಯಕ್ತಪಡಿಸಿದ್ದಾರೆ. ಅಲ್ಲಿಗೆ ಕಳುಹಿಸಿದ ಬಸ್ ಹತ್ತಲು ಹಿಂದೇಟು ಹಾಕಿದ ಕೆಲವು ಶಾಸಕರು ತಮ್ಮ ಕಾರಿನಲ್ಲಿಯೇ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದಾರೆ.

ವಿಧಾನಸೌಧದ ಮುಂದೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಜನರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಸರಕಾರ ರಚನೆಯಾಗುವ ಮುನ್ನವೇ ವಿವಿಧ ಸಚಿವ ಸ್ಥಾನಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಖುದ್ದು ಜೆಡಿಎಸ್ ಶಾಸಕರ ಮುನಿಸುಕೊಂಡರೆ, ಕುಮಾರಸ್ವಾಮಿ ಅವರಿಗೆ ಈ ಸಮಸ್ಯೆ ಬಗೆ ಹರಿಸುವುದೇ ದೊಡ್ಡ ಸವಾಲಾಗಲಿದೆ.