ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಾಕಿರುವ ಫ್ಲೆಕ್ಸ್ ಬಗ್ಗೆ ಮಾಹಿತಿ ಕೇಳಲು ಬಂದ ವಕೀಲ ಮಂಜುನಾಥ್ ಮೇಲೆ ದಯಾನಂದ್ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪುರಸಭೆ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ದಯಾನಂದ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತುಮಕೂರು(ಡಿ.17): ನಗರದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಬಾಬು ಸಹೋದರ ಸಿ.ಟಿ ದಯಾನಂದ್ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಾಕಿರುವ ಫ್ಲೆಕ್ಸ್ ಬಗ್ಗೆ ಮಾಹಿತಿ ಕೇಳಲು ಬಂದ ವಕೀಲ ಮಂಜುನಾಥ್ ಮೇಲೆ ದಯಾನಂದ್ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪುರಸಭೆ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ದಯಾನಂದ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಾಸಕನ ಸಹೋದರನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ವಕೀಲ ಮಂಜುನಾಥ್, ನಿನ್ನೆ ಪುರಸಭೆ ಹೋಗಿ ತಮ್ಮದೊಂದು ಫ್ಲೆಕ್ಸ್ ಹಾಕಲು ಕಟ್ಟಬೇಕಾದ ಹಣದ ಬಗ್ಗೆ ವಿಚಾರಿಸಲು ತೆರಳಿದ್ದಾರೆ. ಆಗ ಅಲ್ಲೇ ಇದ್ದ ದಯಾನಂದ್ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಹಿಂದೆಯೂ ಸಹ ದಯಾನಂದ್ ಸಾಕಷ್ಟು ಜನರ ಮೇಲೆ ಗೂಂಡಾಗಿರಿ ನಡೆಸಿರೋ ಉದಾಹರಣೆಗಳಿವೆಯಂತೆ.