ಬೆಂಗಳೂರು, [ಜ.03] : ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್. ವಿಶ್ವನಾಥ್ ಮುಂದುವರಿಯಲಿದ್ದಾರೆ.

ಆಗಾಗ್ಗೆ ಅನಾರೋಗ್ಯ ಎದುರಿಸುತ್ತಿದ್ದು, ಪಕ್ಷದ ಮಹತ್ವದ ಜವಾಬ್ದಾರಿ ಹೊರಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್​​.ವಿಶ್ವನಾಥ್ ಅವರು ಜೆಡಿಎಸ್​ ರಾಜ್ಯಾಧ್ಯಕ್ಷ ಹುದ್ದೆ ಬಿಟ್ಟುಕೊಡಲು ಮುಂದಾಗಿದ್ದರು. 

ಆದ್ರೆ ಇದಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡರು, ಹಾಡುಹಕ್ಕಿಗೆ ಧೈರ್ಯ ತುಂಬಿ, ನೀನೇ ಅಧ್ಯಕ್ಷನಾಗಿ ಮುಂದುವರಿಯಬೇಕು ಎಂದು ತಲೆ ಸವರಿದ್ದಾರೆ. 

ಜ.03ರಂದು ಜೆಡಿಎಸ್‌ ನಾಯಕತ್ವದಲ್ಲಿ ಬದಲಾವಣೆ? ದೇವೇಗೌಡ್ರು ಹೇಳಿದ್ದೇನು?

ಇನ್ನು ಈ ಕುರಿತು ಮಾತನಾಡಿರುವ ವಿಶ್ವನಾಥ್, ನಾನು ಯಾರಿಗಾದರೂ ಎದುರಾಡಬಹುದು. ಆದರೆ, ಜೆಡಿಎಸ್​ ವರಿಷ್ಠ ದೇವೇಗೌಡರಿಗೆ ಎದುರಾಡಲು ಸಾಧ್ಯವೇ ಇಲ್ಲ. 

ಅನಾರೋಗ್ಯದ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನೇ ಭೇಟಿ ಮಾಡಿ ಮನವಿ ಮಾಡಿದೆ.

ಜ.03ರಂದು ಜೆಡಿಎಸ್‌ ನಾಯಕತ್ವದಲ್ಲಿ ಬದಲಾವಣೆ? ದೇವೇಗೌಡ್ರು ಹೇಳಿದ್ದೇನು?

ಆರೋಗ್ಯ ನಿಮಿತ್ತ ಪಕ್ಷಕ್ಕೆ ನ್ಯಾಯ ಒದಗಿಸಲು ಆಗುತ್ತಿಲ್ಲ. ಹಾಗಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿಗೊಳಿಸುವಂತೆ ದೇವೇಗೌಡರನ್ನು ಕೇಳಿದ್ದೆ. ಆದರೆ ದೇವೆಗೌಡರು ನನ್ನ ತಲೆ ಮೇಲೆ ಕೈ ಇಟ್ಟು ಬೇಡ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರ ಇದೆ. ಈಗ ಪರಿಸ್ಥಿತಿ ಸರಿ ಇಲ್ಲ. ನಿನ್ನಂತಹ ಅನುಭವಿಬೇಕು ಎಂದರು. ಕೊನೆಗೆ ವಿಶ್ವಾಸದ ಬೇಡಿಯ ಬಂಧನಕ್ಕೆ ಒಳಗಾದೆ. ಹಾಗಾಗಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ ಎಂದು ಹೆಚ್​​. ವಿಶ್ವನಾಥ್​ ಅವರು ಹೇಳಿದ್ದಾರೆ.