ಒತ್ತಡಕ್ಕೆ ಮಣಿದ ಹೆಚ್'ಡಿಕೆ ಬದಲಾವಣೆ ನಿರ್ಧಾರ ಸಾಧ್ಯತೆ

First Published 22, Mar 2018, 9:45 PM IST
JDS May Change Candidate List
Highlights

ಮುದ್ದೇಬಿಹಾಳ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಪಕ್ಷ ಬದಲಾವಣೆ ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ವ್ಯಕ್ತವಾದ ವಿರೋಧಿ ಅಭಿಪ್ರಾಯವನ್ನು ಹೆಚ್'ಡಿಕೆ ಗಂಭೀರವಾಗಿ ಪರಿಗಣಿಸಿದ್ದಾರೆ.

ಬೆಂಗಳೂರು(ಮಾ.22): ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಜೆಡಿಎಸ್ ನಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಕ್ಷೇತ್ರಗಳ ನಾಯಕರು ಅಭ್ಯರ್ಥಿಯನ್ನು ಬದಲಾವಣೆ ಮಾಡಲು ವರಿಷ್ಠರ ಮೇಲೆ ಒತ್ತಡ ಹಾಕಿದ್ದು, ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಒತ್ತಡಕ್ಕೆ ಮಣಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅನಿವಾರ್ಯವಾದರೆ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡೋ ಸಂದೇಶ ರವಾನಿಸಿದ್ದಾರೆ.

ಘೋಷಿತ ಅಭ್ಯರ್ಥಿಗಳ ಬಗ್ಗೆ ಆಕ್ಷೇಪ ಹೆಚ್ಚಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡುವ ಸಾಧ್ಯತೆಯಿದೆ. ಮುದ್ದೇಬಿಹಾಳ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಪಕ್ಷ ಬದಲಾವಣೆ ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ವ್ಯಕ್ತವಾದ ವಿರೋಧಿ ಅಭಿಪ್ರಾಯವನ್ನು ಹೆಚ್'ಡಿಕೆ ಗಂಭೀರವಾಗಿ ಪರಿಗಣಿಸಿದ್ದಾರೆ.

ಭಟ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೂ ಮನಸ್ಸು ಮಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷರು ತಂಜೀಮ್ ಸಂಸ್ಥೆ ಬೆಂಬಲ ನೀಡದಿದ್ದರೆ ಅಭ್ಯರ್ಥಿ ಬದಲಾವಣೆ ಮಾಡೋ ಭರವಸೆ ನಿಡಿದ್ದಾರೆ. ಕಳೆದ ಬಾರಿ ತಂಜೀಮ್ ಸಂಸ್ಥೆಯ ಬೆಂಬಲ ಪಡೆದುಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಯಶಸ್ವಿಯಾಗಿರಲಿಲ್ಲ. ನವಾಯತ್ ಮುಸ್ಲಿಂಮರ ಪ್ರಾತಿನಿಧಿಕ ಸಂಸ್ಥೆ ತಂಜೀಮ್ ಬೆಂಬಲ ಸಿಗುವ ಸಾಧ್ಯತೆ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ತಂಜೀಮ್  ನಿರ್ಧಾರ ಗಮನಿಸಿ ಮುಂದಿನ ಹೆಜ್ಜೆ ಇಡೋದಾಗಿ ತಿಳಿಸಿದ್ದಾರೆ.

loader