Asianet Suvarna News Asianet Suvarna News

ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಮಾಸ್ಟರ್ ಪ್ಲಾನ್

ಆಪರೇಷನ್‌ ಕಮಲ' ದ ಭೀತಿಯಲ್ಲಿರುವ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಸುಭದ್ರತೆ ಕಾಪಾಡುವ ಉದ್ದೇಶದಿಂದ ಆಪರೇಷನ್‌ ಕಮಲವನ್ನು ತಿರುಗುಬಾಣವಾಗಿಸಲು ಸದ್ದಿಲ್ಲದೆ ಒಳಗೊಳಗೆ ಸ್ಕೆಚ್‌ ರೂಪಿಸಲಾಗಿದೆ.

JDS Master plan against operation Kamala
Author
Bengaluru, First Published Sep 21, 2018, 12:01 PM IST
  • Facebook
  • Twitter
  • Whatsapp

ಬೆಂಗಳೂರು, [ಸೆ.21]: ಆಪರೇಷನ್‌ ಕಮಲದ ಭೀತಿಯಲ್ಲಿರುವ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಸುಭದ್ರತೆ ಕಾಪಾಡುವ ಉದ್ದೇಶದಿಂದ ಆಪರೇಷನ್‌ ಕಮಲವನ್ನು ತಿರುಗುಬಾಣವಾಗಿಸಲು ಸದ್ದಿಲ್ಲದೆ ಒಳಗೊಳಗೆ ಸ್ಕೆಚ್‌ ರೂಪಿಸಲಾಗಿದೆ.

ಜಾರಕಿಹೊಳಿ ಬ್ರದರ್ಸ್ ನಿಂದ ಎದ್ದಿರುವ ಭಿನ್ನಮತವನ್ನು ಲಾಭವಾಗಿ ಪಡೆದುಕೊಳ್ಳಲು ಬಿಜೆಪಿ ನಾನಾ ಕಸರತ್ತುಗಳನ್ನು ನಡೆಸಿದೆ. ಸಿಕ್ಕಿದೆ ಚಾನ್ಸ್ ಎಂದು ಸಮ್ಮಿಶ್ರ ಸರ್ಕರವನ್ನ ಉರುಳಿಸಲು ಹಲವು ಮಾಸ್ಟರ್ ಪ್ಲಾನ್‌ಗಳನ್ನು ಮಾಡುತ್ತಿದೆ.

"

ಶಾಸಕರಿಗೆ ಹಲವು ಆಮಿಷಗಳನ್ನ ಒಡ್ಡಿ ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರುಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿದೆ. ಇದಕ್ಕಾಗಿ ಬೆಂಗಳೂರಿನಿಂದ ಹೊರಗೆ ಎಲ್ಲಾ ಶಾಸಕರನ್ನೂ ಒಟ್ಟಿಗೆ ಸೇರಿಸಿ ಆಂತರಿಕ ಸಭೆ ನಡೆಸಲು ಜೆಡಿಎಸ್ ನಿರ್ಧರಿಸಿದೆ.  

ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಭೆಯಲ್ಲಿ ಅತೃಪ್ತ ಶಾಸಕರುಗಳಿಗೆ ಜೆಡಿಎಸ್‌ನ ನಾಯಕರು ಶಾಂತಿ ಪಾಠ ಮಾಡಲಿದ್ದಾರೆ.

Follow Us:
Download App:
  • android
  • ios