ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ಇಸ್ರೇಲ್‌ಗೆ ಪ್ರಯಾಣ ಬೆಳೆಸಿತು. ತಂಡದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅಪ್ಪಾಜಿಗೌಡ, ಸಂಸದ ಸಿ.ಎಸ್.ಪುಟ್ಟರಾಜು ಇತರರು ಇದ್ದಾರೆ.
ಬೆಂಗಳೂರು(ಆ.23): ಇಸ್ರೇಲ್ನಲ್ಲಿನ ಮಾದರಿ ಕೃಷಿ ಹಾಗೂ ಅಭಿವೃದ್ಧಿ ವ್ಯವಸ್ಥೆ ಕುರಿತು ಅಧ್ಯಯನ ನಡೆಸುವ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ತಂಡ ಇಸ್ರೇಲ್ಗೆ ಪ್ರಯಾಣ ಬೆಳೆಸಿದೆ.
ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ಇಸ್ರೇಲ್ಗೆ ಪ್ರಯಾಣ ಬೆಳೆಸಿತು. ತಂಡದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅಪ್ಪಾಜಿಗೌಡ, ಸಂಸದ ಸಿ.ಎಸ್.ಪುಟ್ಟರಾಜು ಇತರರು ಇದ್ದಾರೆ.
ಇಸ್ರೇಲ್ ರಾಷ್ಟ್ರವು ಕೃಷಿ ಮತ್ತು ಅಭಿವೃದ್ಧಿಯಲ್ಲಿ ಯಾವ ರೀತಿ ವ್ಯವಸ್ಥೆ ಅಳವಡಿಸಿಕೊಂಡಿದೆ ಎಂಬುದನ್ನು ಅಧ್ಯಯನ ನಡೆಸಿಕೊಂಡು ಸೆ.9ಕ್ಕೆ ಬೆಂಗಳೂರಿಗೆ ತಂಡ ಹಿಂತಿರುಗಲಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಇಸ್ರೇಲ್ ಮಾದರಿ ಕೃಷಿಗೆ ಒತ್ತು ನೀಡಲಾಗುವುದು. ಅಲ್ಲಿನ ಕೃಷಿ ತಜ್ಞರನ್ನು ರಾಜ್ಯಕ್ಕೆ ಕರೆಸಿ ರೈತರಿಗೆ ತರಬೇತಿ ನೀಡಲಾಗುವುದು. 8-10 ತಿಂಗಳಲ್ಲಿ ಮಳೆಯಾಧಾರಿತ ಬೆಳೆಯನ್ನು ಹೇಗೆ ತೆಗೆಯಲಾಗುತ್ತದೆ ಎಂಬುದನ್ನು ಪರಿಚಯಿಸಲಾಗುತ್ತದೆ. ಅಲ್ಲದೇ, ಅಭಿವೃದ್ಧಿಯ ವ್ಯವಸ್ಥೆ ಬಗ್ಗೆಯೂ ತಿಳಿದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದರು.
