ಜೆಡಿಎಸ್​ ಯುವ ಮುಖಂಡ ಪ್ರಜ್ವಲ್ ರೇವಣ್ಣ ತಮ್ಮ ಪಕ್ಷದ ವಿರುದ್ಧವೇ ಗುಡುಗು

First Published 11, Oct 2017, 10:33 PM IST
JDS Leader Prajval Revanna Angry on his own party
Highlights

ಜೆಡಿಎಸ್​ ಯುವ ಮುಖಂಡ ಪ್ರಜ್ವಲ್​ ರೇವಣ್ಣ  ತಮ್ಮ ಪಕ್ಷದ ವಿರುದ್ಧವೇ ಮತ್ತೊಮ್ಮೆ ಗುಡುಗಿದ್ದಾರೆ. 

ಬೆಂಗಳೂರು (ಅ.11): ಜೆಡಿಎಸ್​ ಯುವ ಮುಖಂಡ ಪ್ರಜ್ವಲ್​ ರೇವಣ್ಣ  ತಮ್ಮ ಪಕ್ಷದ ವಿರುದ್ಧವೇ ಮತ್ತೊಮ್ಮೆ ಗುಡುಗಿದ್ದಾರೆ. 

ರಾಜರಾಜೇಶ್ವರಿ ನಗರದ ಜೆಡಿಎಸ್​ ಸಭೆಯಲ್ಲಿ ಮಾತನಾಡಿ, ಹುಣಸೂರು ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೇನೆ. ಕೆಲವು ಬಕೆಟ್​ ರಾಜಕಾರಣಿಗಳು ನನ್ನ ವಿರುದ್ಧ ಷಡ್ಯಂತ್ರ ಮಾಡಿ, ನನ್ನ ಹೇಳಿಕೆ ತಿರುಚಿ, ರಾಜಕೀಯ ಬೆಳವಣಿಗೆಗೆ ಅಡ್ಡಿಪಡಿಸಿದರು. ನಾನು ಬೆಳೆದರೆ  ಅವರ ಕಳ್ಳಾಟ ತಡೆಯುತ್ತೇನೆ ಅನ್ನೋ ಅವರಿಗೆ ಭಯ ಕಾಡ್ತಿತ್ತು ಎಂದರು. ರಾಜರಾಜೇಶ್ವರಿ ತಾಯಿ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಆರ್​ ಆರ್​ ನಗರ ನನಗೆ ಪುನರ್ಜನ್ಮ ನೀಡಲಿದೆ ಎಂದು ಭಾವಿಸುತ್ತೇನೆ ಎಂದು ತಮ್ಮ ರಾಜಕೀಯ ನಡೆಯನ್ನು ಸ್ಪಷ್ಟಪಡಿಸಿದರು.

 

loader