2016ರ ನ.8ರಂದು  ಬಿಜೆಪಿ ಮುಖಂಡ  ಚಿಕ್ಕತಿಮ್ಮೇಗೌಡ ಕೊಲೆ ನಡೆದಿತ್ತು.   ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗೋವಿಂದೇಗೌಡನನ್ನು ಬಂಧಿಸಲಾಗಿತ್ತು

ಬೆಂಗಳೂರು(ಡಿ.09): ಜೆಡಿಎಸ್ ಮುಖಂಡ ಹಾಗೂ ಮಾಜಿ ಕಾರ್ಪೋರೇಟರ್ ಗೋವಿಂದೇ'ಗೌಡ(58) ಅವರನ್ನು ಸುಂಕದಕಟ್ಟೆ ಬಳಿಯ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರ'ಗಳಿಂದ ಕೊಚ್ಚಿ ಕೊಲೆ ಮಾಡಲಾದ್ದಾರೆ.

ಇಂದು ಸಂಜೆ 4.30ಕ್ಕೆ ಹೆಗ್ಗನಹಳ್ಳಿ ಮುಖ್ಯರಸ್ತೆಯ ಕಲ್ಯಾಣ ಮಂಟಪದ ಬಳಿ ಗೋವಿಂದೇ ಗೌಡನ ಮೇಲೆ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಈತನನ್ನು ಸುಂಕದಕಟ್ಟೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 2016ರ ನ.8ರಂದು ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗೋವಿಂದೇಗೌಡನನ್ನು ಬಂಧಿಸಲಾಗಿತ್ತು. ಇತ್ತೀಚಗಷ್ಟೆ ಜಾಮೀನಿನ ಮೇಲೆ ಈತನನ್ನು ಬಿಡುಗಡೆ ಮಾಡಲಾಗಿತ್ತು.