Asianet Suvarna News Asianet Suvarna News

ಅಭ್ಯರ್ಥಿ ನಿಲ್ಲಿಸದ ಜೆಡಿಎಸ್'ಗೆ ನಂಜನಗೂಡು, ಗುಂಡ್ಲುಪೇಟೆ ರಿಸಲ್ಟ್ ಯಾಕೆ ಮುಖ್ಯ ಗೊತ್ತಾ?

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶ ಕ್ಷಣಗಣನೆ ಇದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಎದೆಯಲ್ಲಿ ಢವಢವ ಶುರುವಾಗಿದೆ. ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್​​ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಅಚ್ಚರಿ ಆಗ್ತಿದ್ಯಾ?  ಕ್ಯಾಂಡಿಡೇಟ್ ಹಾಕದಿದ್ರೂ  ಜೆಡಿಎಸ್'​ ಗೆ ಯಾಕೆ ಈ ಕ್ಯೂರಿಯಾಸಿಟಿ ಅಂತೀರಾ? ಈ ಸ್ಟೋರಿ ಓದಿ..

jds interest in by poll results

ಮೈಸೂರು(ಏ. 12): ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಬೈ ಎಲೆಕ್ಸನ್'ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆ ಇಟ್ಟುಕೊಂಡಿವೆ. ಆದ್ರೆ, ಜೆಡಿಎಸ್ ಲೆಕ್ಕಾಚಾರವೇ ಬೇರೆ ಇದೆ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆದ್ದರೂ ಜೆಡಿಎಸ್​'ಗೆ ಕಷ್ಟ. ಬಿಜೆಪಿ ಗೆದ್ರೂ ಜೆಡಿಎಸ್'​ಗೆ ಸಂಕಷ್ಟ. ಹೀಗಾಗಿ ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್​ ಗೆಲ್ಲೋ ಬದಲು, ಒಂದು ಕ್ಷೇತ್ರ ಕಾಂಗ್ರೆಸ್ ವಶವಾಗಲಿ.. ಮತ್ತೊಂದು ಬಿಜೆಪಿ ಗೆಲ್ಲಲಿ ಅನ್ನೋದು ಜೆಡಿಎಸ್​ ಆಶಯ.

ಏನು ಕಾರಣ?
ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ರೆ ಯಡಿಯೂರಪ್ಪ ಶಕ್ತಿ ದ್ವಿಗುಣಗೊಳ್ಳಲಿದೆ. ಕೇವಲ ಉತ್ತರ ಕರ್ನಾಟವಷ್ಟೇ ಅಲ್ಲ, ಮೈಸೂರು ಭಾಗದಲ್ಲೂ ಬಿಜೆಪಿ ಶಕ್ತಿ ಹೆಚ್ಚಲಿದೆ. ಇದ್ರಿಂದ ಜೆಡಿಎಸ್​ ಭದ್ರಕೋಟೆಗೆ ಬಿಜೆಪಿ ಕಾಲಿಡುತ್ತೇ ಅನ್ನೋ ಭೀತಿ.

ಇನ್ನು, ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಗೆದ್ರೆ.. ಮೈಸೂರು ಭಾಗದವರೇ ಆದ ಸಿದ್ರಾಮಯ್ಯರ ಶಕ್ತಿ ಹೆಚ್ಚಾಗುತ್ತೆ. ಮೈಸೂರು ಭಾಗದಲ್ಲಿ JDS ಓಟಕ್ಕೆ ಬ್ರೇಕ್ ಬೀಳಲಿದೆ ಅನ್ನೋ ಭಯ. ಆದ್ರಿಂದ ಎರಡರಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿ ಅಂತ ಬಯಸಿದೆ ಜೆಡಿಎಸ್.

ಒಂದು ಕ್ಷೇತ್ರದಲ್ಲಿ  ಕಾಂಗ್ರೆಸ್ ಮತ್ತೊಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಜೆಡಿಎಸ್ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಹುಮ್ಮಸಿಂದ ಕೈಹಾಕಲಿದೆ. ಅದ್ರಲ್ಲೂ  ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದಲ್ಲಿ ಪಕ್ಷವನ್ನು ಹೆಚ್ಚು ಬಲಿಷ್ಠವಾಗಿ ಬೆಳೆಸಬಹುದು ಅನ್ನೋದು ಜೆಡಿಎಸ್​ ಮುಖಂಡರ ಲೆಕ್ಕಾಚಾರ. ಜೊತೆಗೆ ಯಡಿಯೂರಪ್ಪಗೂ ಹೇಳಿಕೊಳ್ಳುವ ಜನಪ್ರಿಯತೆ ಇಲ್ಲ, ಸಿದ್ದರಾಮಯ್ಯ ಜನಪ್ರಿಯತೆಯೂ ಅಷ್ಟಕಷ್ಟೇ ಎನ್ನುತ್ತಾ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬಹುದು. ಇಂತಹ ಲೆಕ್ಕಾಚಾರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಮುಳುಗಿದ್ದಾರಂತೆ.

- ಶ್ರೀನಿವಾಸ ಹಳಕಟ್ಟಿ, ಪೊಲಿಟಿಕಲ್ ಬ್ಯೂರೋ, ಸುವರ್ಣ ನ್ಯೂಸ್

Follow Us:
Download App:
  • android
  • ios