ಮಹಿಳೆಯರಿಗೇಕೆ ಜೆಡಿಎಸ್ ಗಾಳ..? ಹಿಂದೆ ಒಂದು ಬಲವಾದ ಉದ್ದೇಶ..

JDS Eye On Lady Candidates
Highlights

ಮಾದಿಗ, ಭೋವಿ, ಲಂಬಾಣಿ ಸಮುದಾಯ ಪ್ರಬಲವಾಗಿರುವ, ಲಿಂಗಾಯತ ಹಾಗೂ ಕುರುಬ ಮತಗಳು ನಿರ್ಣಾಯಕವಾಗಿರುವ ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವನ್ನು ಹಾಲಿ ಕಾಂಗ್ರೆಸ್ಸಿನ ಕೆ. ಶಿವಮೂರ್ತಿ ಪ್ರತಿನಿಧಿಸುತ್ತಿದ್ದಾರೆ.

ಮಾಯಕೊಂಡ : ಮಾದಿಗ, ಭೋವಿ, ಲಂಬಾಣಿ ಸಮುದಾಯ ಪ್ರಬಲವಾಗಿರುವ, ಲಿಂಗಾಯತ ಹಾಗೂ ಕುರುಬ ಮತಗಳು ನಿರ್ಣಾಯಕವಾಗಿರುವ ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವನ್ನು ಹಾಲಿ ಕಾಂಗ್ರೆಸ್ಸಿನ ಕೆ. ಶಿವಮೂರ್ತಿ ಪ್ರತಿನಿಧಿಸುತ್ತಿದ್ದಾರೆ.

ಅವರು ಮತ್ತೊಮ್ಮೆ ಕಣಕ್ಕಿಳಿಯಲು ಪ್ರಯತ್ನ ನಡೆಸುತ್ತಿದ್ದಾರೆ. ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ, ಜಿ.ಪಂ. ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ, ಜಿ.ಪಂ. ಸದಸ್ಯ ಕೆ.ಎಸ್. ಬಸಂತಪ್ಪ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಕೂಡ ಟಿಕೆಟ್ ಪೈಪೋಟಿಯಲ್ಲಿದ್ದಾರೆ.

ಬಿಜೆಪಿಯಲ್ಲೂ ಹಲವು ಆಕಾಂಕ್ಷಿಗಳು ಇದ್ದಾರೆ. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಪ್ರೊ.ಎನ್.ಲಿಂಗಣ್ಣ, ಮಾಯಕೊಂಡ ಆನಂದಪ್ಪ, ಕೆ.ಎಸ್.ಬಸವರಾಜ ಟಿಕೆಟ್‌ಗಾಗಿ ತಮ್ಮದೇ ಪ್ರಯತ್ನ ನಡೆಸಿದ್ದಾರೆ. ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಶೀಲಾ ನಾಯ್ಕ ಅವರಿಗೆ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡಿದೆ.

loader