ಖ್ಯಾತ ಗೀತ ರಚನೆಕಾರ, ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿರುವ ’ಗುಲ್ ಮೊಹರ್ ನುಡಿನೋಟಗಳು’ ಪುಸ್ತಕ ಬಿಡುಗಡೆ ಸಮಾರಂಭ ಇದೇ ಭಾನುವಾರ ಬೆಳಿಗ್ಗೆ 10.30 ಕ್ಕೆ ಬಸವನ ಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಹಿತಿ ಕೆ ಪಿ ರಾವ್ ಹಾಗೂ ಕತೆಗಾರ ಕೆ.ಎನ್ ಗಣೇಶಯ್ಯ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು: ಖ್ಯಾತ ಗೀತ ರಚನೆಕಾರ, ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿರುವ ’ಗುಲ್ ಮೊಹರ್ ನುಡಿನೋಟಗಳು’ ಪುಸ್ತಕ ಬಿಡುಗಡೆ ಸಮಾರಂಭ ಇದೇ ಭಾನುವಾರ ಬೆಳಿಗ್ಗೆ 10.30 ಕ್ಕೆ ಬಸವನ ಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಹಿತಿ ಕೆ ಪಿ ರಾವ್ ಹಾಗೂ ಕತೆಗಾರ ಕೆ.ಎನ್ ಗಣೇಶಯ್ಯ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾಷೆ, ಲಿಪಿ, ಕಲೆ, ಸಂಗೀತ, ವಿಜ್ಞಾನ, ಸಾಹಿತ್ಯಗಳು ಸಂಯುಕ್ತ ಆಸಕ್ತಿಯ ಪಯಣಿಗ, ನುಡಿ ತಂತ್ರಾಂಶದ ರುವಾರಿ ಎನ್ನುವ ವಿಚಾರದ ಬಗ್ಗೆ ಶ್ರೀ ಕೆ. ಪಿ ರಾವ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಖ್ಯಾತ ಕಥನಕಾರ, ಕೃಷಿ ವಿಜ್ಞಾನಿ ಕೆ. ಎನ್ ಗಣೇಶಯ್ಯ ಐತಿಹ್ಯಗಳನ್ನು ಮಾನವಿಕ ಆಸಕ್ತಿಯಿಂದ ನಿಮ್ಮ ಮುಂದೆ ವಿಸ್ತರಿಸಲಿದ್ದಾರೆ.
ಆಸಕ್ತರು 9.30 ಕ್ಕೆ ಬಂದರೆ ಕಾಫಿ ತಿಂಡಿ ಒಟ್ಟಿಗೆ ಮಾಡಬಹುದು. ಬನ್ನಿ, ಭಾಗವಹಿಸಿ. ಕಾರ್ಯಕ್ರಮವನ್ನು ಚಂದಗಾಣಿಸಿ.
ನಿಮ್ಮ ನಿರೀಕ್ಷೆಯಲ್ಲಿ,
