ತಮಿಳುನಾಡು ಮಾಜಿ ಸಿಎಂ, ದಿವಂಗತ ಜಯಲಲಿತಾಗೆ ಸೇರಿದ ಟೀ ಎಸ್ಟೇಟ್‌'ನಲ್ಲಿ ಮತ್ತೆ ಮತ್ತೆ ನಿಗೂಢತೆ ನಡೆಯುತ್ತಿದೆ. ಇದ್ದಕ್ಕಿದ್ದಂತೆ ಎಸ್ಟೇಟ್‌'ನ ಅಕೌಂಟೆಂಟ್‌ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಅನುಮಾನ ಹುಟ್ಟುಹಾಕಿದೆ

ಚೆನ್ನೈ(ಜು.04): ತಮಿಳುನಾಡು ಮಾಜಿ ಸಿಎಂ, ದಿವಂಗತ ಜಯಲಲಿತಾಗೆ ಸೇರಿದ ಟೀ ಎಸ್ಟೇಟ್‌'ನಲ್ಲಿ ಮತ್ತೆ ಮತ್ತೆ ನಿಗೂಢತೆ ನಡೆಯುತ್ತಿದೆ. ಇದ್ದಕ್ಕಿದ್ದಂತೆ ಎಸ್ಟೇಟ್‌'ನ ಅಕೌಂಟೆಂಟ್‌ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಅನುಮಾನ ಹುಟ್ಟುಹಾಕಿದೆ.

ಊಟಿಯಲ್ಲಿರುವ ಕೊಡನಾಡ್‌ ಎಸ್ಟೇಟ್‌'ನ ಅಕೌಂಟೆಂಟ್‌ ದಿನೇಶ್ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇನ್ನು ಕಳೆದ ಏಪ್ರಿಲ್‌'ನ 24ರಂದು ಇದೇ ಎಸ್ಟೇಟ್‌'ನ ಸೆಕ್ಯೂರಿಟಿ ಗಾರ್ಡ್‌ನನ್ನು ಗ್ಯಾಂಗ್‌ವೊಂದು ಕೊಲೆಗೈದಿತ್ತು. ಇದಾದ ಬಳಿಕ ಕೊಲೆ ಪ್ರಕರಣದ ಶಂಕಿತ ಆರೋಪಿಯೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಅಷ್ಟೇ ಅಲ್ಲ ಮತ್ತೋರ್ವ ಶಂಕಿತ ಆರೋಪಿ ಕೂಡ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದ.

ಜಯಲಲಿತಾ ಕಾರು ಡ್ರೈವರ್‌ ಕೂಡಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಇದೀಗ ಎಸ್ಟೇಟ್‌'ನ ಅಕೌಂಟೆಂಟ್​'ನ ಅನುಮಾನಾಸ್ಪದ ಸಾವು ಅನುಮಾನಕ್ಕೆ ಎಡೆಮಾಡಿದೆ. ಒಟ್ಟಾರೆ ಜಯಲಲಿತಾ ಸಾವಿನ ಬಳಿಕ ಅವರ ಜೊತೆಗಿದ್ದವರು ಒಬ್ಬೊಬ್ಬರಾಗೇ ಸಾವಿನ ಮನೆ ಸೇರುತ್ತಿದ್ದು ಆಸ್ತಿ ಕಬಳಿಸಲು ಹುನ್ನಾರ ನಡೀತಿದೆಯಾ? ಅನ್ನೋ ಶಂಕೆ ಮೂಡಿಸಿದೆ.