ಇವತ್ತು ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾರವರ 69ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಮ್ಮಾ ಸಮಾಧಿಗೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಎಐಎಡಿಎಂಕೆ ಕಾರ್ಯಕರ್ತರು, ಅಭಿಮಾನಿಗಳು ಮರೀನಾ ಬೀಚ್ ​ಬಳಿ ಇರುವ ಅಮ್ಮಾ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ. ಅಲ್ಲದೇ ರಾಜಕಾರಣಿಗಳು, ಚಿತ್ರ ನಟ-ನಟಿಯರು ಜಯಲಲಿತಾರವರ ಸಮಾಧಿಗೆ ತೆರಳಿ ಪುಷ್ಪಗುಚ್ಚ ಸಲ್ಲಿಸಿದ್ದಾರೆ.

ಚೆನ್ನೈ(ಫೆ.24): ಇವತ್ತು ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾರವರ 69ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಮ್ಮಾ ಸಮಾಧಿಗೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಎಐಎಡಿಎಂಕೆ ಕಾರ್ಯಕರ್ತರು, ಅಭಿಮಾನಿಗಳು ಮರೀನಾ ಬೀಚ್ ​ಬಳಿ ಇರುವ ಅಮ್ಮಾ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ. ಅಲ್ಲದೇ ರಾಜಕಾರಣಿಗಳು, ಚಿತ್ರ ನಟ-ನಟಿಯರು ಜಯಲಲಿತಾರವರ ಸಮಾಧಿಗೆ ತೆರಳಿ ಪುಷ್ಪಗುಚ್ಚ ಸಲ್ಲಿಸಿದ್ದಾರೆ.

ಇನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸೊಸೆ ದೀಪಾ ಜಯಕುಮಾರ್ ತಾವು ಈ ಹಿಂದೆ ಹೇಳಿದಂತೆ ನೂತನ ಪಕ್ಷಕ್ಕೆ ಜಯಲಲಿತಾ ಅವರ ಹುಟ್ಟುಹಬ್ಬದ ದಿನ ಇಂದು ರಂದು ಚಾಲನೆ ನೀಡಲಿದ್ದಾರೆ. ತಮ್ಮ ಮನೆಯಲ್ಲಿ ಇಂದು ತಮ್ಮ ಪಕ್ಷದ ಕಚೇರಿ ಉದ್ಘಾಟಿಸಿ ಸಂಜೆ ವೇಲೆ ನೂತನ ಪಕ್ಷದ ಹೆಸರು ಪ್ರಕಟಿಸಿರುವುದಾಗಿ ಹೇಳಿದ್ದಾರೆ.