ಚೆನ್ನೈ(ಅ.6): ತೀರಾ ಅನಾರೋಗ್ಯದ ಕಾರಣದಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ಸಾಕು ಮಗ ಸುಧಾಕರನ್ 17 ವರ್ಷದ ನಂತರ ಭೇಟಿಯಾಗಿದ್ದಾರೆ. 1994ರಲ್ಲಿ ಮದುವೆಯಾಗಿ ಕೆಲ ವರ್ಷಗಳಲ್ಲಿ ಜಯಲಲಿತಾ ಅವರಿಂದ ಬೇರೆಯಾಗಿದ್ದರೂ ಸಾಕು ಮಗ. ಈತ ಜಯಲಲಿತಾ ಆಪ್ತೆ ಶಶಿಕಲಾಳ ಸಂಬಂಧಿ ಕೂಡ ಹೌದು. ಈವರೆಗೂ ಎಲ್ಲಿದ್ದ ಎಂಬುದರ ಬಗ್ಗೆ ಮಾಹಿತಿ ತಿಳಿದಿರಲಿಲ್ಲ. ಇಂದು ಅಮ್ಮನ ಭೇಟಿಗೆ ಆಗಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಧಾಕರನ್ ಮದುವೆಯಾಗಿರುವುದು ತಮಿಳಿನ ಮೇರು ನಟ ಶಿವಾಜಿ ಗಣೇಶನ್ ಅವರ ಮೊಮ್ಮಗಳು ಸತ್ಯವತಿಯನ್ನು. ಸುಧಾಕರನ್ ಲಗ್ನಪತ್ರಿಕೆಯಲ್ಲಿ ದತ್ತು ಮಗ ಎಂದು ಜಯಲಲಿತಾ ಘೋಷಿಸಿದ್ದರು.100 ಕೋಟಿ ರೂ. ಖರ್ಚು ಮಾಡಿ ಸುಧಾಕರನ್ ಮದುವೆ ಮಾಡಿದ್ದರು. 1996ರ ಚುನಾವಣೆಯಲ್ಲಿ ಜಯಲಲಿತಾಳನ್ನು ಸೋಲಿಸಿದ್ದಕ್ಕಾಗಿ ದತ್ತು ಮಗ ಸುಧಾಕರನ್ ಅವರನ್ನು ದೂರ ಮಾಡಿದ್ದರು. ನಂತರದ ಕೆಲ ವರ್ಷಗಳ ನಂತರ ಸರ್ಕಾರದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದ ಕಾರಣ ಈತ ತನ್ನ ಮಗನಲ್ಲ ಎಂದು ದೂರ ಮಾಡಿದ್ದರು ಎನ್ನಲಾಗಿದೆ.