1999ರಲ್ಲಿ ಯಾವುದೋ ಒಂದು ಸಮಾರಂಭದಲ್ಲಿ ಇಬ್ಬರೂ ಮುಖಾಮುಖಿಯಾಗ್ತಾರೆ. ಹೇಗಿದ್ದೀರಿ ಚೆನ್ನಾಗಿದ್ದೀರ ಅಂತ ಇಬ್ಬರೂ ಕುಶಲೋಪರಿ ವಿಚಾರಿಸ್ತಾರೆ. ಅಷ್ಟು ಬಿಟ್ರೆ ಬೇರೆ ಯಾವ ಮಾತುಕಥೆನೂ ನಡೆಯೋದಿಲ್ಲ
ಜಯಲಲಿತಾ ಆಸ್ಪತ್ರೆಗೆ ಅಡ್ಮಿಟ್ ಆಗಿ ಇಷ್ಟು ದಿನ ಆದರೂ, ಇನ್ನೂ ಹುಷಾರಾಗ್ತಿಲ್ಲ. ಇದರ ನಡುವಲ್ಲೇ ಶುಕ್ರವಾರ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಜಯಲಲಿತಾ ಆರೋಗ್ಯ ಮತ್ತಷ್ಟು ಕ್ಷೀಣಿಸ್ತಾ ಇದೆ. ಹೀಗೆ ಬಿಟ್ರೆ, ಸಮಸ್ಯೆ ಮತ್ತಷ್ಟು ಜಾಸ್ತಿಯಾಗೋ ಸಾಧ್ಯತೆ ಇದೆ ಅಂತ ವೈದ್ಯರು ಹೇಳ್ತಿದ್ದಾರೆ. ಹೀಗಾಗಿ ಜಯಲಲಿತಾರನ್ನ ವಿದೇಶಕ್ಕೆ ಕರ್ಕೊಂಡ್ ಹೋಗೋ ಆಲೋಚನೆ ನಡೀತಿದೆ. ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗ್ತಿದ್ರೂ, ಮಗನನ್ನ ನೋಡ್ಬೇಕು ಅಂತ ಜಯಲಲಿತಾಗೆ ಯಾವತ್ತೂ ಅನ್ನಿಸಲೇ ಇಲ್ಲ. ಒಂದು ಕಾಲದಲ್ಲಿ ತಾನೇ ಮುಂದೆ ನಿಂತು ದತ್ತು ಸ್ವೀಕರಿಸಿದ ಮಗನನ್ನ ಒಂದ್ಸಲಾನೂ ನೋಡ್ಲಿಲ್ಲ.
ಅಮ್ಮನ ಆರೋಗ್ಯ ಕೆಟ್ಟಿದೆ ಅಂತ ಗೊತ್ತಾದ ತಕ್ಷಣ, ಮಗಾ ಆಸ್ಪತ್ರೆ ಬಾಗಿಲಿನವರೆಗೂ ಓಡೋಡಿ ಬಂದಿದ್ದ. 17 ವರ್ಷಗಳ ನಂತರ ಅಮ್ಮನ ಮುಖ ನೋಡ್ಬೇಕು ಅಂತ ಬಂದಿದ್ದ ಮಗನಿಗೆ, ಅಮ್ಮನ ದರ್ಶನವೇ ಸಿಗಲಿಲ್ಲ. ಅಷ್ಟಕ್ಕೂ, ಜಯಲಲಿತಾಗೆ ಮಗನ ಮೇಲೆ ಸಿಟ್ಯಾಕೆ? ಮಗನೇ ಜಯಾ ಬದುಕಿಗೆ ಮುಳ್ಳಾಗಿದ್ದನಾ?
17 ವರ್ಷಗಳನಂತರಬಂದಿದ್ದದತ್ತುಪುತ್ರನಿಗೆದರ್ಶನಸಿಗಲಿಲ್ಲ!
ಜಯಲಲಿತಾ ತಮಿಳುನಾಡಿನ ಅಮ್ಮ. ಬರೀ ಅಮ್ಮ ಮಾತ್ರ ಅಲ್ಲ. ಅಮ್ಮನಿಗಿಂತಲೂ ಹೆಚ್ಚು.. ಯಾಕಂದ್ರೆ, ಜಯಲಲಿತಾ ಎಲ್ಲಾ ಸಿಎಂ ಗಳಂತೆ ಇರಲಿಲ್ಲ.. ಮನೆಯ ಸದಸ್ಯೆಯಂತಿದ್ರು. ಯಾರ ಬಾಯಲ್ಲಿ ಕೇಳಿದ್ರೂ, ಬರೀ ಅಮ್ಮನದ್ದೇ ಗುಣಗಾನ..
ಮನೆಯಲ್ಲಿರೋ ಅಮ್ಮನಿಗೆ ಏನಾದ್ರೂ ಹುಷಾರಿಲ್ಲ ಅಂದಾಕ್ಷಣ, ನಾವು ನೀವೆಲ್ಲಾ ಓಡೋಡಿ ಬರ್ತೀವಿ. ಅಮ್ಮನನ್ನ ಕರ್ಕೊಂಡು ಆಸ್ಪತ್ರೆಗೆ ಹೋಗ್ತೀವಿ.. ಅಂಥಾದರಲ್ಲಿ, ಇಡೀ ತಮಿಳುನಾಡಿಗೆ ಅಮ್ಮನಾಗಿದ್ದ ಜಯಲಲಿತಾ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ ಅಂದ್ರೆ, ನಾಡಿನ ಜನ ಸುಮ್ಮನೇ ಇರ್ತಾರಾ? ರಾತ್ರೋ ರಾತ್ರಿ ಅಪೋಲೋ ಆಸ್ಪತ್ರೆ ಮುಂದೆ ಜಮಾಯಿಸಿದ್ರು.
ನೋಡ್ರೀ,ಈ ಜನಗಳ ಮನಸಲ್ಲಿರೋ ಆತಂಕಾವನ್ನು ಒಂದ್ಸಲ ಚೆನ್ನಾಗಿ ನೋಡಿ. ಜಯಲಲಿತಾಗಾಗಿ ಇವರೆಲ್ಲಾ ರಾತ್ರೋ ರಾತ್ರಿ ನಿದ್ದೆಗೆಟ್ಟು ನಿಂತಿದ್ರು. ಇನ್ನೂ ಒಂದಷ್ಟು ಜನ ಅಮ್ಮ ಹುಷಾರಾಗ್ಲಿ ಅಂತ ಕಂಡ ಕಂಡ ದೇವರಿಗೆ ಕೈ ಮುಗಿದು ಪೂಜೆ ಮಾಡಿದ್ರು.
ಇಡೀ ತಮಿಳುನಾಡಿನ ಜನರೇ ಆತಂಕ್ಕೆ ಒಳಗಾಗಿದ್ರು. ಜಯಲಲಿತಾ ಆದಷ್ಟು ಬೇಗ ಹುಷಾರಾಗಿ ಬರಲಿ ಅಂತ ಆರಸ್ತಾ ಇದ್ರು. ಆದ್ರೆ ಇಷ್ಟೆಲ್ಲಾ ಬೆಳವಣಿಗೆಗಳ ನಡುವಲ್ಲಿ, ಓರ್ವ ವ್ಯಕ್ತಿ ಮಿಸ್ಸಾಗಿದ್ದ. ಆ ವ್ಯಕ್ತಿ ಯಾರು ಗೊತ್ತಾ? ಜಯಲಲಿತಾ ದತ್ತು ಪುತ್ರ ಸುಧಾಕರನ್..
ಬೇರೆಯಾದಗಿನಿಂದ ಒಂದುದಿನವೂಇಬ್ಬರೂಮಾತಾಡಿರಲಿಲ್ಲ
1995ರಲ್ಲಿ ಸುಧಾಕರನ್ನನ್ನ ದತ್ತುಪುತ್ರನಾಗಿ ಸ್ವೀಕರಿಸಿದ್ರು ಜಯಲಲಿತಾ. ಆಪ್ತ ಗೆಳತಿ ಹೇಳಿದ್ಳು ಅಂತ, ಈತನನ್ನ ದತ್ತುಪುತ್ರನನ್ನಾಗಿ ಮಾಡ್ಕೋತಾರೆ. ಆದ್ರೆ ನಂತರದಲ್ಲಿ ಈ ಮಗಾನೇ ತಾಯಿಗೆ ಕಂಟಕವಾಗಿ ಕಾಡೋದಕ್ಕೆ ಶುರು ಮಾಡ್ತಾನೆ. ಯಾವ ಮಟ್ಟಕ್ಕೆ ಅಂದ್ರೆ ಒಂದೇ ವರ್ಷದಲ್ಲಿ ಈತನ ಬಂಡವಾಳ ಜಯಲಲಿತಾಗೆ ಗೊತ್ತಾಗಿಬಿಡುತ್ತೆ. 1996ರಲ್ಲಿ ದತ್ತುಪುತ್ರನನ್ನ ದೂರ ಮಾಡ್ತಾರೆ ಜಯಲಲಿತಾ. ಇದಾದ ಮೂರು ವರ್ಷಗಳ ನಂತರ, ಅಂದ್ರೆ 1999ರಲ್ಲಿ ಯಾವುದೋ ಒಂದು ಸಮಾರಂಭದಲ್ಲಿ ಇಬ್ಬರೂ ಮುಖಾಮುಖಿಯಾಗ್ತಾರೆ. ಹೇಗಿದ್ದೀರಿ ಚೆನ್ನಾಗಿದ್ದೀರ ಅಂತ ಇಬ್ಬರೂ ಕುಶಲೋಪರಿ ವಿಚಾರಿಸ್ತಾರೆ. ಅಷ್ಟು ಬಿಟ್ರೆ ಬೇರೆ ಯಾವ ಮಾತುಕಥೆನೂ ನಡೆಯೋದಿಲ್ಲ. ಆವತ್ತಿನಿಂದ ಇವತ್ತಿನವರೆಗೆ ಅಂದ್ರೆ ಸುಮಾರು 17 ವರ್ಷ'ವಾದ್ರೂ, ತಾಯಿ ಮಗ ಒಂದು ದಿನಾನೂ ಭೇಟಿ ಮಾಡಿರಲಿಲ್ಲ. ಒಂದು ಸಣ್ಣ ಮಾತು ಕೂಡ ಆಡಿರಲಿಲ್ಲ..
ಅಮ್ಮನನ್ನ ನೋಡೋದಕ್ಕೆ ಅಂತ 18ನೇ ದಿನ ಮಗ ಓಡೋಡಿ ಬರ್ತಾನೆ. ಸುಧಾಕರನ್ ಬರ್ತಾ ಇದ್ದಾನೆ ಅನ್ನೋದು ಜಯಲಲಿತಾಗೂ ಗೊತ್ತಾಗಿಬಿಡುತ್ತೆ. 17 ವರ್ಷಗಳಿಂದ ನೋಡೋದಕ್ಕು ಬಾರದ ಮಗ ಈಗ ಬರ್ತಿದ್ದಾನೆ. ಎಲ್ಲವೂ ಸರಿ ಹೋಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು,. ಆದ್ರೆ ಆಗಿದ್ದೇ ಬೇರೆ. ಆಸ್ಪತ್ರೆವರೆಗೂ ಬಂದಿದ್ದ ಸುಧಾಕರನ್ಗೆ ಅಮ್ಮನ ದರ್ಶನವೇ ಸಿಗೋದಿಲ್ಲ.
ಗಂಟೆಗಟ್ಟಲೇಕಾದುಕುಳಿತರೂಸಿಗಲಿಲ್ಲದರ್ಶನ
ಆಸ್ಪತ್ರೆಗೆ ಬಂದು ಗಂಟೆಗಟ್ಟಲೇ ಕೂತ್ರೂ, ಅಮ್ಮನ ದರ್ಶನ ಸಿಗೋದಿಲ್ಲ. ಆಸ್ಪತ್ರೆ ಒಳಗೆ ಹೋಗೋದಕ್ಕಾಗದೇ ವಾಪಸ್ ಬರ್ತಾರೆ ಸುಧಾಕರನ್. ಯಾಕೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಇಷ್ಟವಿಲ್ಲದ ಮಗನನ್ನ ನೋಡೋದಕ್ಕೆ ಜಯಲಲಿತಾನೇ ನಿರಾಕರಿಸಿದ್ರಾ? ಅಥವಾ ಜಯಲಲಿತಾ ಆಪ್ತರು ಸುಧಾಕರನ್ ವಿರುದ್ಧ ಸಿಟ್ಟಿಗೆದ್ದು ವಾಪಸ್ ಕಳಿಸಿದ್ರಾ? ಇದು ನಿಗೂಢವಾಗಿದೆ.
ಮಗವಿಲನ್ಆಗಿದ್ದ
ಅದು 1995. ಜಯಲಲಿತಾಗೆ ಒಬ್ಬ ಮಗ ಸಿಕ್ಕಿದ್ದ. ಆದ್ರೆ ಆ ಮಗ ಮುಂದೊಂದು ದಿ ನ ತನ್ನ ಬದುಕಿಗೆ ವಿಲನ್ ಆಗ್ತಾನೆ ಅಂತ ಆಕೆ ಅಂದುಕೊಂಡಿರಲಿಲ್ಲ. ಈ ಸುಧಾಕರನ್ ಯಾರು ಗೊತ್ತಾ?ಆಪ್ತ ಗೆಳತಿ ಶಶಿಕಲಾಳ ಕ್ಲೋಸ್ ರಿಲೇಟಿವ್. ಜಯಾಗೆ ಹಿಂದೂ ಮುಂದೂ ಯಾರೂ ಇಲ್ಲ. ಹೀಗಾಗಿ ಜಯಲಲಿತಾ ಆಸ್ತಿ ಹೊಡೀಬೇಕು ಪ್ಲಾನ್ ನಡೆಯುತ್ತೆ. ಅದರಂತೆ ಜಯಲಲಿತಾ ಬದುಕಲ್ಲಿ ದತ್ತುಪುತ್ರನ ಎಂಟ್ರಿಯಾಗುತ್ತೆ. 1995ರಲ್ಲಿ ನಟ ಶಿವಾಜಿ ಗಣೇಶನ್ ಮೊಮ್ಮಗಳ ಜೊತೆ ದತ್ತು ಪುತ್ರನ ಮದುವೆನೂ ಆಗುತ್ತೆ. ಆ ಕ್ಷಣದಿಂದಲೇ ಕಂಟಕವಾಗಿ ಕಾಡ್ತಾನೆ ಈ ಮಗ.
ಮಗನಿಂದ ಜೈಲಿಗೆ ಹೋದ ಅಮ್ಮ
ದತ್ತು ಪುತ್ರ ಆಗಿದ್ರೂ, ಅದ್ದೂರಿಯಾಗಿ ಮದುವೆ ಮಾಡಿದ್ರು ಜಯಲಲಿತಾ. ನೂರಾರು ಕೋಟಿ ಖರ್ಚು ಮಾಡಿದ್ರು. ಆಗ್ಲೇ ನೋಡಿ. ಅಮ್ಮನ ಮೇಲೆ ಕೇಸ್ ರಿಜಿಸ್ಟರ್ ಆಗೋದು.. 18 ವರ್ಷ ಕೇಸ್ ನಡೆಯುತ್ತೆ. ಕೊನೆಗೆ 2014ರಲ್ಲಿ 22 ದಿನ ಜೈಲಲ್ಲಿದ್ದು ನಂತರ ಜಾಮೀನಿನ ಮೇಲೆ ಹೊರಗೆ ಬರ್ತಾರೆ.
1996ರಲ್ಲಿ ತಮಿಳುನಾಡಿನ ಎಲೆಕ್ಷನ್ ಅನೌನ್ಸ್ ಆಗುತ್ತೆ. ಆ ಟೈಮಲ್ಲಿ, ಪಕ್ಷದ ಟಿಕೆಟ್ಗಳ ಮಾರಾಟ ನಡೆಯುತ್ತೆ. ಬರೀ 4 ಸೀಟ್ಗಳನ್ನ ಗೆದ್ದ ಜಯಲಲಿತಾ ಪಕ್ಷ, ತೀವ್ರ ಮುಖಭಂಗ ಅನುಭವಿಸುತ್ತೆ. ಎಲೆಕ್ಷನ್ನಲ್ಲಿ ಎಐಡಿಎಂಕೆ ಸೋಲುಂಡು, ಅಧಿಕಾರ ಕಳೆದುಕೊಳ್ತಾರೆ ಜಯಲಲಿತಾ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ, ಓರ್ವ ವ್ಯಕ್ತಿಯನ್ನ ಪೊಲೀಸರು ಅರೆಸ್ಟ್ ಮಾಡ್ತಾರೆ. ಅರೆಸ್ಟ್ ಆದ ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಜಯಲಲಿತಾ ದತ್ತುಪುತ್ರ ಇದೇ ಸುಧಾಕರನ್.
ಇಷ್ಟೆಲ್ಲಾ ಗೊತ್ತಾದ್ಮೇಲೆ, ಮಗನನ್ನ ದೂರ ಮಾಡ್ತಾರೆ ಜಯಲಲಿತಾ. 17 ವರ್ಷ ಆದ್ರೂ ಮಗನನ್ನ ಮೀಟ್ ಮಾಡಿರಲಿಲ್ಲ. ಆಸ್ಪತ್ರೆಗೆ ಅಡ್ಮಿಟ್ ಆದಾಗ್ಲೂ, ಸುಧಾಕರನ್ ಜಯಲಲಿತಾರನ್ನ ನೋಡೋದಕ್ಕೆ ಬರೋದಿಲ್ಲ. ಆದ್ರೆ 18ನೇ ದಿನ ಶಶಿಕಲಾನೇ ಪ್ಲಾನ್ ಮಾಡಿ ಕರೆಸಿಕೊಳ್ತಾಳೆ. ಯಾಕೆ ಗೊತ್ತಾ? ಆಸ್ತಿ ಹೊಡೆಯೋದಕ್ಕೆ ಅಲ್ಲೊಂದು ಮಾಸ್ಟರ್ ಪ್ಲಾನ್ ನಡೆದಿತ್ತು.
17 ವರ್ಷದ ನಂತರ ಅಮ್ಮನನ್ನ ನೋಡೋದಕ್ಕೆ ಬಂದಿದ್ದ ಸುಧಾಕರನ್. ಅದೂ ಜಯಲಲಿತಾ ಆಸ್ಪತ್ರೆಗೆ ಸೇರಿ, 18 ದಿನ ಆದ್ಮೇಲೆ. ಅಷ್ಟು ಲೇಟಾಗಿ ಬಂದಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಆ ಸ್ಟೋರಿ.
ಆಸ್ತಿಗಾಗಿಬಂದ ಮಗ
ಜಯಲಲಿತಾ ಆಸ್ತಿ ಮೇಲೆ ಗೆಳತಿ ಶಶಿಕಲಾಗೆ ಕಣ್ಣಿತ್ತು. ಆದ್ರೆ ಜಯಲಲಿತಾ ಆಸ್ಪತ್ರೆಗೆ ಅಡ್ಮಿಟ್ ಆದ ನಂತರ, ಒಂದು ವಿಚಾರದ ಗೊತ್ತಾಯ್ತು. ಏನದು ಗೊತ್ತಾ? ಜಯಲಲಿತಾ ಒಂದು ವಿಲ್ ಬರೆದಿದ್ದಾರೆ. ಮತ್ತು ಆ ವಿಲ್ನಲ್ಲಿ ನಟ ಅಜಿತ್ ಹೆಸರು ಇದೆ ಅನ್ನೋದು.
ಜಯಲಲಿತಾ ಆಸ್ತಿಮೇಲೆ ಶಶಿಕಲಾ ಕಣ್ಣಿತ್ತು. ಇತ್ತ ದತ್ತು ಮಗ ಸುಧಾಕರನ್ ಕೂಡ, ಆಸ್ತಿ ನನಗೆ ಬರಬಹುದು ಅಂತ ಆಲೋಚಿಸ್ತಿದ್ದ. ಜಯಲಿತಾ ಮುಂದಿನ ಉತ್ತರಾದಿಕಾರಿ ತಾನೇ ಅಂತ ಅಂದುಕೊಂಡಿದ್ದ,. ಆದ್ರೆ ಜಯಲಲಿತಾ ಸೀಕ್ರೆಟ್ ವಿಲ್ ಬರೆದಿದ್ದಾರೆ. ಆ ವಿಲ್ನಲ್ಲಿ ಶಶಿಕಲಾ ಹೆಸರಾಗಲಿ, ದತ್ತುಮಗ ಸುಧಾಕರನ್ ಹೆಸರಾಗಲಿ ಇಲ್ಲ. ಅದರಲ್ಲಿರೋದು ನಟ ಅಜಿತ್ ಹೆಸರು ಅನ್ನೋದು ಗೊತ್ತಾಗುತ್ತೆ. ಇದು ಗೊತ್ತಾಗಿದ್ದೇ ತಡ. ಅಮ್ಮ ಮಗನ ಸೆಂಟಿಮೆಂಟ್ ಕ್ರಿಯೇಟ್ ಮಾಡೋದಕ್ಕೆ ಪ್ಲಾನ್ ಮಾಡ್ತಾಳೆ ಶಶಿಕಲ. ಕೂಡ್ಲೇ ಸುಧಾಕರನ್ನನ್ನ ಆಸ್ಪತ್ರೆಗೆ ಕರೆಸಿಕೊಳ್ತಾಳೆ. 18 ದಿನ ಆದ್ರೂ ಬಾರದ ಮಗ, ಆಸ್ತಿಗಾಗಿ ಓಡೋಡಿ ಬಂದಿದ್ದ.
ಸುಧಾಕರನ್ ಅಪೋಲೋ ಆಸ್ಪತ್ರೆ ಮುಂದೆ ಬಂದು ಗಂಟೆಗಟ್ಟಲೇ ಕಾಯ್ತಾನೆ. ಆದ್ರೆ ಅಮ್ಮನ ದರ್ಶನ ಸಿಗೋದಿಲ್ಲ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಅಂತ ವಾಪಸ್ ಹೋಗ್ತಾನೆ ಸುಧಾಕರನ್..
ಆಸ್ಪತ್ರೆಯಲ್ಲಿ ಸೀರಿಯಸ್ಸಾಗಿದ್ರೂ, ಕಟ್ಟ ಮಗನನ್ನ ನೋಡೋದಕ್ಕೆ ಜಯಲಲಿತಾ ಇಷ್ಟ ಪಡಲಿಲ್ವಾ? ಅಮ್ಮನ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ಈತನನ್ನು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬಿಡಲಿಲ್ವಾ? ಅಥವ ಆಸ್ಪತ್ರೆ ಸಿಬ್ಬಂದಿನೇ ತಡೆದ್ರಾ? ಇದು ನಿಗೂಢವಾಗಿದೆ.
ಜಯಲಲಿತಾರನ್ನ ನೋಡೋದಕ್ಕೆ ಯಾರನ್ನೂ ಬಿಡ್ತಿಲ್ಲ. ಬರೀ ವೈದ್ಯರಿಗೆ ಮಾತ್ರ ಒಳಗೆ ಎಂಟ್ರಿ ಇದೆ. ಹೀಗಾಗಿ ಸುಧಾಕರನ್ನೂ ಒಳಗೆ ಬಿಟ್ಟಿಲ್ಲ ಅಂತ ಹೇಳಲಾಗ್ತಿದೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ, ಜಯಲಲಿತಾರನ್ನ ವಿದೇಶಕ್ಕೆ ಕರೆದೊಯ್ಯೋ ಸಾಧ್ಯತೆ ಇದೆ ಅಂತ ಅಂದಾಜಿಸಲಾಗ್ತಿದೆ.
ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್
ಸೂಚನೆ: ಜನರಾಡುವ ಕಲ್ಪಿತ ಮಾತುಗಳನ್ನು ಆಧರಿಸಿದ ಸುದ್ದಿಯಾಗಿದೆಯೇ ವಿನಃ ವಾಸ್ತವಾಂಶಗಳಿಂದ ಕೂಡಿಲ್ಲ
