ಸ್ವತಃ ಜಯಲಲಿತಾ ಅವರೇ ಯಾರ ಅಭಿಮಾನಕ್ಕೆ ಒಳಗಾಗಿದ್ದರು ಎನ್ನುವುದಕ್ಕೆ ಬಾಲಿವುಡ್‌ ನಟಿ ಶರ್ಮಿಳಾ ಟಾಗೋರ್‌ ರಹಸ್ಯ ಬಿಚ್ಚಿಟ್ಟಿದ್ದಾರೆ.

ನವದೆಹಲಿ(ಡಿ. 08): ಸುಪ್ರಿಂ ಕೋರ್ಟ್‌'ನ ಮಾಜಿ ಜಡ್ಜ್‌ ಮಾರ್ಕಂಡೇಯ ಕಾಟ್ಜು ಕೆಲ ತಿಂಗಳ ಹಿಂದೆ ಜಯಲಲಿತಾ ಅವರ ಜೊತೆ ತಮಗಿದ್ದ ಕ್ರಷ್‌ ಅನ್ನು ಫೇಸ್‌'ಬುಕ್‌'ನಲ್ಲಿ ಬರೆದುಕೊಂಡಿದ್ದರು. ‘ಯವ್ವನದ ದಿನಗಳಲ್ಲಿ ಅವರ ಮೇಲೆ ಪ್ರೀತಿ ಚಿಗುರಿತ್ತು. ಆಸ್ಪತ್ರೆಯಿಂದ ಅವರು ಬೇಗನೆ ಗುಣಮುಖರಾಗಿ ಬರಲಿ' ಎಂದು ಪ್ರಾರ್ಥಿಸಿದ್ದರು. ಇದು ಜಯಲಲಿತಾ ಮೇಲಿದ್ದ ಕ್ರಷ್‌ ಆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವತಃ ಜಯಲಲಿತಾ ಅವರೇ ಯಾರ ಅಭಿಮಾನಕ್ಕೆ ಒಳಗಾಗಿದ್ದರು ಎನ್ನುವುದಕ್ಕೆ ಬಾಲಿವುಡ್‌ ನಟಿ ಶರ್ಮಿಳಾ ಟಾಗೋರ್‌ ರಹಸ್ಯ ಬಿಚ್ಚಿಟ್ಟಿದ್ದಾರೆ. ಶರ್ಮಿಳಾ ಪತಿ, ಮಾಜಿ ಕ್ರಿಕೆಟಿಗ ಮನ್ಸೂರ್‌ ಅಲಿಖಾನ್‌ ಪಟೌಡಿ ಅವರನ್ನು ಜಯಾ ಅಭಿಮಾನಿಸುತ್ತಿದ್ದರಂತೆ. ‘ನನ್ನ ಪತಿಯ ಬ್ಯಾಟಿಂಗ್‌ ಅನ್ನು ಜಯಾ ಬಹಳ ಇಷ್ಟಪಟ್ಟು ನೋಡುತ್ತಿದ್ದರು. ಪಟೌಡಿ ಆಟ ನೋಡಲೆಂದೇ ಒಂದು ಬೈನಾಕ್ಯುಲರ್‌ ಹಿಡಿದು ಚೆನ್ನೈನ ಸ್ಟೇಡಿಯಮ್ಮಿಗೆ ಬರುತ್ತಿದ್ದರು' ಎಂದಿದ್ದಾರೆ ಶರ್ಮಿಳಾ.

ಪಟೌಡಿಯನ್ನು ಅಭಿಮಾನಿಸುತ್ತಿದ್ದ ಜಯಾ ಅವರನ್ನು ಶರ್ಮಿಳಾ ದಂಪತಿ ಹಿಂದೊಮ್ಮೆ ಭೇಟಿ ಮಾಡಿತ್ತಂತೆ. ಅರವತ್ತರ ದಶಕವದು. ಚೆನ್ನೈನ ಚರ್ಚ್ ಪಾರ್ಕ್ ಸ್ಕೂಲಿನಲ್ಲಿ ಓದುತ್ತಿದ್ದ ಜಯಾ ಅವರನ್ನು ಭೇಟಿಯಾಗಿದ್ದರಂತೆ.

ಜಯಾ ಅವರು ಕ್ರಿಕೆಟಿಗ ಪಟೌಡಿ ಅವರನ್ನು ಕೇವಲ ಅಭಿಮಾನಿಸುತ್ತಿದ್ದರಷ್ಟೇ. ಆದರೆ, ಇವರು ಕ್ರಷ್‌ ಇಟ್ಟುಕೊಂಡಿದ್ದು ಗುಜರಾತ್‌ ಮೂಲದ ಕ್ರಿಕೆಟಿಗ ನಾರಿ ಕಂಟ್ರಾಕ್ಟರ್‌ ಅವರನ್ನು. ಇದನ್ನು ಜಯಲಲಿತಾ ಸಿಮಿ ಗೇರ್‌'ವಾಲ್‌ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ‘ಶಾಲಾ ದಿನಗಳಲ್ಲಿ ಕ್ರಿಕೆಟಿಗ ನಾರಿ ಕಂಟ್ರಾಕ್ಟರ್‌, ನಟ ಶಮ್ಮಿ ಕಪೂರ್‌ ಅವರ ಕ್ರಷ್‌'ಗೆ ಒಳಗಾಗಿದ್ದೆ' ಎಂದು ನಗುತ್ತಾ ಹೇಳಿಕೊಂಡಿದ್ದರು. ಈಗ ನಾರಿ ಕಂಟ್ರಾಕ್ಟರ್‌ಗೆ 82 ವರ್ಷ. ಈ ಬಗ್ಗೆ ಕಂಟ್ರಾಕ್ಟರ್‌'ರನ್ನು ಕೇಳಿದಾಗ ಅವರು ಹೇಳುವುದಿಷ್ಟು; ‘ನಾನು ಯಾವತ್ತೂ ಜಯಲಲಿತಾರನ್ನು ಭೇಟಿ ಆಗಿರಲಿಲ್ಲ. ಆದರೆ, ಅವರೊಮ್ಮೆ ಸಂದರ್ಶನದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿದ್ದನ್ನು ಕೇಳಿದ್ದೇನೆ'!

(epaper.kannadaprabha.in)