ದೇಶದಲ್ಲೇ ಶ್ರೀಮಂತ ಸಂಸದೆ ಜಯಾ ಬಚ್ಚನ್‌ ..! ಜಯಾ ಬಚ್ಚನ್​ ಆಸ್ತಿ ಮೌಲ್ಯ 1,000 ಕೋಟಿ ರೂ!  ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಲು  ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಬಹಿರಂಗಗೊಂಡಿದೆ. ​

ನವದೆಹಲಿ (ಮಾ. 13): ದೇಶದಲ್ಲೇ ಶ್ರೀಮಂತ ಸಂಸದೆ ಜಯಾ ಬಚ್ಚನ್‌ ..! ಜಯಾ ಬಚ್ಚನ್​ ಆಸ್ತಿ ಮೌಲ್ಯ 1,000 ಕೋಟಿ ರೂ! ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಬಹಿರಂಗಗೊಂಡಿದೆ. ​

2012 ರಲ್ಲಿ 492 ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದ್ದ ಜಯಾ- ಅಮಿತಾಬ್​ ದಂಪತಿ ಬಳಿ 62 ಕೋಟಿ ರೂ ಮೌಲ್ಯದ ಚಿನ್ನಾಭರಣ ಇದೆ ಎಂದು ಹೇಳಲಾಗಿತ್ತು. 13 ಕೋಟಿ ಮೌಲ್ಯದ 12 ವಾಹನಗಳು 1 ರೋಲ್ಸ್‌ರಾಯ್ಸ್‌, 3 ಮರ್ಸಿಡಿಸ್‌, 1 ಪೋರ್ಶೆ, 1 ರೇಂಜ್‌ ರೋವರ್‌ ಕಾರುಗಳಿವೆ. ಅಮಿತಾಬ್‌ ಬಳಿ 1 ನ್ಯಾನೋ ಕಾರು, 1 ಟ್ರ್ಯಾಕ್ಟರ್‌ ಕೂಡ ಇದೆ ಎನ್ನಲಾಗಿದೆ. ಒಟ್ಟು ಚರಾಸ್ತಿ ಮೌಲ್ಯ 540 ಕೋಟಿ ರೂ.ಗೆ ಏರಿದೆ. ನೋಯಿಡಾ, ಭೋಪಾಲ್‌, ಪುಣೆ, ಅಹಮದಾಬಾದ್‌ , ಗಾಂಧಿನಗರ, ಫ್ರಾನ್ಸ್’​ನಲ್ಲೂ ಆಸ್ತಿ ಹೊಂದಿದ್ದಾರೆ.