ಅಮಿತ್ ಶಾ ಅನುಪಸ್ಥಿತಿಯಲ್ಲೇ ಶಾಸಕರು, ಸಂಸದರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರು: ಅಮಿತ್ ಶಾ ಅನುಪಸ್ಥಿತಿಯಲ್ಲೇ ಶಾಸಕರು, ಸಂಸದರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜವಾಬ್ದಾರಿ ಕೊಟ್ಟ ಕ್ಷೇತ್ರಕ್ಕೆ ಯಾರು ಹೋಗಿದ್ದೀರಿ ಎಂದು ಜಾವಡೇಕರ್ ಪ್ರಶ್ನೆ ಕೇಳಿದ್ದಾರೆ, ಆದರೆ ಪ್ರಶ್ನೆಗೆ ಶಾಸಕರು, ಸಂಸದರಿಂದ ಸ್ಪಷ್ಟ ಉತ್ತರ ಸಿಗಲಿಲ್ಲ.
ಕ್ಷೇತ್ರಕ್ಕೆ ಯಾರೆಲ್ಲಾ ಹೋಗಿಲ್ಲ ಎದ್ದು ನಿಲ್ಲಿ ಎಂದು ಸೂಚಿಸಿದ ಯಡಿಯೂರಪ್ಪ, ಎದ್ದು ನಿಂತು ಜವಾಬ್ದಾರಿ ನಿಭಾಯಿಸದೇ ಇರುವುದನ್ನು ಖಾತ್ರಿ ಪಡಿಸಿದರು.
ಕ್ಷೇತ್ರ ಉಸ್ತುವಾರಿ ವಹಿಸಿದ್ದರೂ ಕ್ಷೇತ್ರದತ್ತ ತಲೆ ಹಾಕದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪರಿಂದ ಜಾವಡೇಕರ್ ವಿವರಣೆ ಪಡೆದಿದ್ದಾರೆ.
ಪರಿವರ್ತನಾ ಯಾತ್ರೆ, ಮದುವೆ ನೆಪ ಹೇಳಿದ ಸಂಸದರು, ಶಾಸಕರಿಗೆ ಜನವರಿ 15ರೊಳಗೆ ವರದಿ ಸಲ್ಲಿಸಬೇಕೆಂದು ಬಿಎಸ್ವೈ ತಾಕೀತು ಮಾಡಿದ್ದಾರೆ.
