ಟೋಕಿಯೋಗೆ ತೆರಳುವ ಸುಕುಬಾ ಎಕ್ಸ್‌'ಪ್ರೆಸ್ ರೈಲು ಮಿನಾಮಿ ನಾಗರೇಯಮಾ ನಿಲ್ದಾಣದಿಂದ 9 ಗಂಟೆ 44 ನಿಮಿಷ 40 ಸೆಕೆಂಡ್‌'ಗೆ ನಿರ್ಗಮಿಸುವ ಬದಲಿಗೆ, 9 ಗಂಟೆ 44 ನಿಮಿಷ 20 ಸೆಕೆಂಡ್‌ಗೆ ಅಂದರೆ, 20 ಸೆಕೆಂಡ್ ಮುಂಚಿತವಾಗಿ ನಿರ್ಗಮಿಸಿತ್ತು.
ಟೋಕಿಯೊ(ನ.18): ನಮ್ ದೇಶದಲ್ಲಿ ಸರ್ಕಾರಿ ಬಸ್ಸು, ರೈಲು ಸೇರಿದಂತೆ ಯಾವ ವಾಹನವೂ ನಿಗದಿತ ಸಮಯಕ್ಕೆ ಬರುವುದಿಲ್ಲ ಅನ್ನೋದು ಕಾಮನ್. ಆದರೆ, ಜಪಾನ್'ನಲ್ಲಿ ನಿಗದಿತ ಸಮಯಕ್ಕಿಂತ 20 ಸೆಕೆಂಡ್'ಗಳ ಮುಂಚಿತವಾಗಿಯೇ ರೈಲ್ವೆ ಪ್ಲಾಟ್'ಫಾರಂನಿಂದ ಟ್ರೈನ್ ನಿರ್ಗಮಿಸಿದೆ.
ಇದೇ ಕಾರಣಕ್ಕಾಗಿ ಅಲ್ಲಿನ ಸುಕುಬಾ ಎಕ್ಸ್'ಪ್ರೆಸ್ ರೈಲು ಕಂಪನಿ ಗ್ರಾಹಕರ ಕ್ಷಮೆ ಯಾಚನೆ ಮಾಡಿದೆ. ಟೋಕಿಯೋಗೆ ತೆರಳುವ ಸುಕುಬಾ ಎಕ್ಸ್'ಪ್ರೆಸ್ ರೈಲು ಮಿನಾಮಿ ನಾಗರೇಯಮಾ ನಿಲ್ದಾಣದಿಂದ 9 ಗಂಟೆ 44 ನಿಮಿಷ 40 ಸೆಕೆಂಡ್'ಗೆ ನಿರ್ಗಮಿಸುವ ಬದಲಿಗೆ, 9 ಗಂಟೆ 44 ನಿಮಿಷ 20 ಸೆಕೆಂಡ್ಗೆ ಅಂದರೆ, 20 ಸೆಕೆಂಡ್ ಮುಂಚಿತವಾಗಿ ನಿರ್ಗಮಿಸಿತ್ತು.
ಈ ಘಟನೆ ಬಗ್ಗೆ ಯಾರೊಬ್ಬರೂ ದೂರು ನೀಡಿಲ್ಲವಾದರೂ, ರೈಲು ಕಂಪನಿ ಗ್ರಾಹಕರ ಕ್ಷಮೆ ಕೋರಿದೆ.
