ಎವರೆಸ್ಟ್ ಏರುವ ಎಂಟನೇ ಪ್ರಯತ್ನದಲ್ಲಿ ಪರ್ವತಾರೋಹಿ ಸಾವು!

news | Tuesday, May 22nd, 2018
Suvarna Web Desk
Highlights

ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಪ್ರಯತ್ನದಲ್ಲಿ ಜಪಾನ್ ಪರ್ವತಾರೋಹಿಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಜಪಾನ್ ನ ನೊಬುಕಾಜು ಕುರಿಕಿ ಎಂಬ ಪರ್ವತಾರೋಹಿ ಈ ಹಿಂದೆ ಏಳು ಬಾರಿ ಮೌಂಟ್ ಎವರೆಸ್ಟ್ ಏರಲು ವಿಫಲ ಪ್ರಯತ್ನ ನಡೆಸಿದ್ದರು. ಆದರೆ ತಮ್ಮ ಎಂಟನೇ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಪಾನ್ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಬೆಂಗಳೂರು (ಮೇ. 22): ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಪ್ರಯತ್ನದಲ್ಲಿ ಜಪಾನ್ ಪರ್ವತಾರೋಹಿಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಜಪಾನ್ ನ ನೊಬುಕಾಜು ಕುರಿಕಿ ಎಂಬ ಪರ್ವತಾರೋಹಿ ಈ ಹಿಂದೆ ಏಳು ಬಾರಿ ಮೌಂಟ್ ಎವರೆಸ್ಟ್ ಏರಲು ವಿಫಲ ಪ್ರಯತ್ನ ನಡೆಸಿದ್ದರು. ಆದರೆ ತಮ್ಮ ಎಂಟನೇ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಪಾನ್ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಈ ಹಿಂದಿನ ಪ್ರಯತ್ನದಲ್ಲಿ ಕುರಿಕಿ ತಮ್ಮ ಬೆರಳುಗಳನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ. ಆದರೂ ದೃತಿಗೆಡದೇ ಕುರಿಕಿ ಮತ್ತೆ ಎವರೆಸ್ಟ್ ಏರಲು ಸಜ್ಜಾಗಿದ್ದರು. ಆದರೆ ಶಿಖರದ ತುದಿಯಲ್ಲಿ ಆಕ್ಸಿಜನ್ ಕೊರತೆಯಿಂದ ಕುರಿಕಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  ಕುರಿಕಿ ೨೦೦೪ ರಲ್ಲಿ ಉತ್ತರ ಅಮೆರಿಕದ ಅತೀ ಎತ್ತರದ ಶಿಖರ ಏರಿ ಖ್ಯಾತಿ ಪಡೆದಿದ್ದರು.

ಸತತ ಏಳು ವಿಫಲ ಪ್ರಯತ್ನಗಳ ಹೊರತಾಗಿಯೂ ಕುರಿಕಿ ಎವರೆಸ್ಟ್ ಏರುವ ಕನಸನ್ನು ಜೀವಂತವಾಗಿಟ್ಟುಕೊಂಡಿದ್ದರು. ಆದರೆ ತನ್ನನ್ನು ಅತೀ ಹೆಚ್ಚು ಪ್ರೀತಿಸಿದ ಪರ್ವತಾರೋಹಿಯನ್ನೇ ಮೌಂಟ್ ಎವರೆಸ್ಟ್ ಬಲಿ ಪಡೆದಿದೆ ಎಂದು ಕುರಿಕಿ ಅವರ ಕುಟುಂಬ ಸದಸ್ಯರು ಕಂಬನಿ ಮಿಡಿದಿದ್ದಾರೆ.

Comments 0
Add Comment

    Related Posts