Asianet Suvarna News Asianet Suvarna News

ಜಪಾನ್‌ ರಾಜ ಅಕಿಹಿಟೋ ಪದತ್ಯಾಗ; 200 ವರ್ಷದಲ್ಲಿ ಇದೇ ಮೊದಲು

ಜಪಾನ್‌ನ ರಾಜ ಅಕಿಹಿಟೋ ಮಂಗಳವಾರ ಪದತ್ಯಾಗ ಮಾಡಿದ್ದು, ಅವರ ಪುತ್ರ ನರುಹಿಟೋ (59) ದೇಶದ 126ನೇ ರಾಜನಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Japan emperor Akihito first to step down in more than 200 years history
Author
Bengaluru, First Published May 1, 2019, 8:23 AM IST

ಟೋಕಿಯೋ (ಮೇ. 01): ಜಪಾನ್‌ನ ರಾಜ ಅಕಿಹಿಟೋ ಮಂಗಳವಾರ ಪದತ್ಯಾಗ ಮಾಡಿದ್ದು, ಅವರ ಪುತ್ರ ನರುಹಿಟೋ (59) ದೇಶದ 126ನೇ ರಾಜನಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜರೊಬ್ಬರು ಬದುಕಿರುವಾಗಲೇ ಹೀಗೆ ಪದತ್ಯಾಗ ಮಾಡುತ್ತಿರುವುದು ಜಪಾನ್‌ನ ರಾಜಮನೆತನದ ಕಳೆದ 200 ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಇದೇ ಕಾರಣಕ್ಕಾಗಿ ಜಪಾನ್‌ನಲ್ಲಿ 10 ದಿನಗಳ ಕಾಲ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ತಾವು ವಯೋಸಹಜ ತೊಂದರೆಗಳಿಂದ ಬಳಲುತ್ತಿರುವ ಕಾರಣ, ರಾಜಮನೆತನ ಮುಖ್ಯಸ್ಥನಾಗಿ ನಿರ್ವಹಿಸಲೇಬೇಕಾದ ಕೆಲವೊಂದು ಕಾರ್ಯಗಳನ್ನು ನಿರ್ವಹಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಕಿಹಿಟೋ (85) ಪದತ್ಯಾಗ ಮಾಡಿದ್ದಾರೆ. ಈ ಸಂಬಂಧ ಮಂಗಳವಾರ ಜಪಾನ್‌ನ ಅರಮನೆಯಲ್ಲಿ ಹಲವು ವಿಧಿವಿಧಾನಗಳನ್ನು ನಡೆಸಲಾಯಿತು. ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ನರುಹಿಟೋ ಜಪಾನ್‌ನ ನೂತನ ರಾಜನಾಗಿ ಅಧಿಕಾರ ವಹಿಸಿಕೊಂಡರು. ಅಕಿಹಿಟೋ 1989ರಲ್ಲಿ ನೂತನ ರಾಜನಾಗಿ ಅಧಿಕಾರ ಸ್ವೀಕರಿಸಿದ್ದರು.

ಕ್ರಿಸ್ತಪೂರ್ವ 600 ರಿಂದಲೂ ಜಪಾನ್‌ನಲ್ಲಿ ಇದೇ ರಾಜಮನೆತನ ಆಡಳಿತ ನಡೆಸುತ್ತಿದ್ದು, ವಿಶ್ವದಲ್ಲೇ ಅತ್ಯಂತ ಸುದೀರ್ಘ ಅವಧಿಯ ವಂಶಪಾರಂಪರ್ಯದ ರಾಜಮನೆಯ ಎಂಬ ಹಿರಿಮೆಯನ್ನು ಹೊಂದಿದೆ.

Follow Us:
Download App:
  • android
  • ios