ಜಂತಕಲ್ ಮೈನಿಂಗ್ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜಂತಕಲ್ ಗಣಿ ಕಂಪನಿ ಮಾಲೀಕ ವಿನೋದ್ ಗೋಯಾಲ್ ವಿಚಾರಣೆ ವೇಳೆ ಹಲವು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ.
ಬೆಂಗಳೂರು (ಜೂ.21): ಜಂತಕಲ್ ಮೈನಿಂಗ್ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜಂತಕಲ್ ಗಣಿ ಕಂಪನಿ ಮಾಲೀಕ ವಿನೋದ್ ಗೋಯಾಲ್ ವಿಚಾರಣೆ ವೇಳೆ ಹಲವು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ.
ಗಂಗಾರಾಮ್ ಬಡೇರಿಯಾ , ಪುತ್ರ ಗಗನ್ ಬಡೇರಿಯಾ ಮ್ಯೂಸಿಕಲ್ ಕರಿಯರ್ಗಾಗಿ ಲಂಚದ ಬೇಡಿಕೆ ಇಟ್ಟಿದ್ದ . 2007ರಲ್ಲಿ ಗಂಗರಾಮ್ ಬಡೇರಿಯಾ ಚೆಕ್ ಮೂಲಕ ಎರಡು ಬಾರಿ 20 ಲಕ್ಷ ರೂ ಲಂಚ ಪಡೆದಿದ್ದ. ರಿಚ್ಮಂಡ್ ಟೌನ್ ಮತ್ತು ಹೆಚ್ಎಸ್ಆರ್ ಲೇಔಟ್ ಬ್ಯಾಂಕ್ಗೆ ಕ್ರೆಡಿಟ್ ಮಾಡಲಾಗಿತ್ತು. ಗಗನ್ ಬಡೇರಿಯಾ ತನ್ನ ತಂದೆಯಿಂದ ಹಣ ಪಡೆದು ತನ್ನ ಅಕೌಂಟ್ಗೆ ಹಾಕಿಕೊಂಡಿದ್ದ. ಸದ್ಯ ಗಂಗರಾಮ್ ಬಡೇರಿಯಾ ಪುತ್ರನಿಗೆ ಬಂಧನದ ಭೀತಿ ಶುರುವಾಗಿದೆ.
ನಿರೀಕ್ಷಣಾ ಜಾಮೀನಿಗಾಗಿ ಗಗನ್ ಬಡೇರಿಯಾ ಅರ್ಜಿ ಸಲ್ಲಿಸಿದ್ದಾನೆ. ಗನನ್ ಬಂಡೇರಿಯಾಗೆ ಜಾಮೀನು ನೀಡದಂತೆ ಎಸ್ಐಟಿ ಆಕ್ಷೇಪಣೆ ಸಲ್ಲಿಸಿದೆ. ಪ್ರತ್ಯಕ್ಷವಾಗಿ ಅಪ್ಪನ ಭ್ರಷ್ಟಚಾರದಲ್ಲಿ ಮಗ ಭಾಗಿಯಾದ ಆರೋಪ ಹಿನ್ನೆಲೆಯಲ್ಲಿ ಗಗನ್ ಬಡೇರಿಯಾಗೆ ಬಂಧನದ ಭೀತಿ ಶುರುವಾಗಿದೆ.
