ಸಿದ್ದರಾಮಯ್ಯ ಅವರ ಸಿಎಂ ಗಾದಿಗೇರಲು ರೆಡ್ಡಿ ಸಹೋದರರ ವಿರುದ್ಧದ ಬಳ್ಳಾರಿ ಪಾದಯಾತ್ರೆಯು ಪ್ರಮುಖ ಕಾರಣವಾಗಿತ್ತು
ಬೆಂಗಳೂರು(ಅ.22): ಆರು ವರ್ಷಗಳ ಬಳಿಕ ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ಧನ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ತಮ್ಮ ಮಗಳು ಬ್ರಹ್ಮಣಿ ವಿವಾಹದ ಆಹ್ವಾನ ಪತ್ರಿಕೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ ಜನಾರ್ಧನ ರೆಡ್ಡಿ ಮದುವೆಗೆ ಕುಟುಂಬ ಸಮೇತ ಬರುವಂತೆ ಸಿಎಂಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಗಳ ಮದುವೆಯ ವಿಡಿಯೂ ತೋರಿಸಿ, ಚಿತ್ರೀಕರಣದ ಬಗ್ಗೆ ಸಿ.ಎಂಗೆ ವಿವರಿಸಿದರು.
ಸಿದ್ದರಾಮಯ್ಯ ಅವರ ಸಿಎಂ ಗಾದಿಗೇರಲು ರೆಡ್ಡಿ ಸಹೋದರರ ವಿರುದ್ಧದ ಬಳ್ಳಾರಿ ಪಾದಯಾತ್ರೆಯು ಪ್ರಮುಖ ಕಾರಣವಾಗಿತ್ತು. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ರೆಡ್ಡಿ ಸಹೋದರರು ಧೈರ್ಯವಿದ್ದರೆ ಬಳ್ಳಾರಿಗೆ ಬರುವಂತೆ ಆಹ್ವಾನವಿತ್ತಿದ್ದರು. ಇದನ್ನು ಸಿದ್ದರಾಮಯ್ಯ ಸವಾಲಾಗಿ ಸ್ವೀಕರಿಸಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡು. ರೆಡ್ಡಿ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದನು ಇಲ್ಲಿ ಸ್ಮರಿಸಬಹುದು.
