ರಾಯಚೂರು (ಮೇ. 28): ಮಂತ್ರಾಲಯ ರಾಯರ ಮಠಕ್ಕೆ ಗಾಲಿ ಜನಾರ್ಧನ ರೆಡ್ಡಿ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. 

‘ನಾವು ಚಿಕ್ಕಂದಿನಿಂದಲೂ ರಾಯರ ಮಠಕ್ಕೆ ಬರುತ್ತಿದ್ದೇವೆ. ನಮ್ಮ ತಂದೆ ತಾಯಿಯವರ ಜೊತೆಗೂ ಕುಟುಂಬ ಸಮೇತರಾಗಿ ನಾವು ಬರ್ತಿದ್ವಿ. ನಮ್ಮ ಜೀವನದ ಸಾಕ್ಷತ್ಕಾರ ಅಂದ್ರೆ ರಾಘವೇಂದ್ರ ಸ್ವಾಮೀಜಿಗಳು. ಅವರ ಮಹಿಮೆ ಎಷ್ಟು ಹೇಳಿದ್ರೂ ಕಡಿಮೆನೇ, ಹಾಗಾಗಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇವೆ. ಭಗವಂತ ಆಂಧ್ರ ಪ್ರದೇಶ ಹಾಗೂ ಭಾರತಕ್ಕೆ ಒಳ್ಳೆಯದನ್ನು ಮಾಡಿದ್ದಾನೆ’ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. 

ಮಾಜಿ ಸಿಎಂ ವೈ ಎಸ್ ರಾಜಶೇಖರೆಡ್ಡಿ ದೇವರ ಸ್ವರೂಪವಾಗಿದ್ದರು. ಅಂತ ಮಹಾನುಭಾವರ ಮಗ ಈಗ ಆಂಧ್ರದ ಮುಖ್ಯಮಂತ್ರಿ ಆಗುತ್ತಿದ್ದಾರೆ. ಇದು ನನ್ನೊಬ್ಬನ ಹರಕೆ ಅಲ್ಲ, ಇಡೀ ಆಂಧ್ರದ ಜನ ಅವರನ್ನ ಗೆಲ್ಲಿಸಲು ಓಟು ಹಾಕಿದ್ದಾರೆ. ನರೇಂದ್ರ ಮೋದಿ ಕೂಡಾ ಭಗವಂತನ ಆಶೀರ್ವಾದದಿಂದ ಮತ್ತೊಮ್ಮೆ ಪ್ರಧಾನಿ ಆಗಿದ್ದಾರೆ ಎಂದಿದ್ದಾರೆ. 

ಮಗಳ ಮದುವೆ ನಂತರ ಮಂತ್ರಾಲಯಕ್ಕೆ ಬಂದಿರಲಿಲ್ಲ. ಹಾಗಾಗಿ ಕುಟುಂಬ ಸಮೇತ ಬಂದು ಆಶೀರ್ವಾದ ಪಡೆದಿದ್ದೇನೆ. ಗಾಣಗಾಪುರ ದತ್ತಾತ್ರೇಯ, ಮಂತ್ರಾಲಯ ರಾಘವೇಂದ್ರ ಸ್ವಾಮಿ ಅವಧೂತರು ಅವರಿಂದ ಲೋಕ ಕಲ್ಯಾಣವಾಗಿದೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.