ಬಳ್ಳಾರಿ(ಅ.19): ಗಣಿಧಣಿ ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹದ ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ವಿಶೇಷ ರೀತಿಯಲ್ಲಿ ಸಿದ್ದವಾಗಿರುವ ಈ ಮದುವೆಯ ಮಮತೆಯ ಕರೆಯೋಲೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿದ್ದಾರೆ.

 

 

 

 

 

 

 

 

 

 

 

ವಿನೂತನ ರೀತಿಯಲ್ಲಿ ಸಿದ್ಧಪಡಿಸಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಜನಾರ್ಧನ ರೆಡ್ಡಿ, ಪುತ್ರ, ಪತ್ನಿ, ಪುತ್ರಿ ಹಾಗೂ ಭಾವಿ ಅಳಿಯ ರಾಜೀವ್ ರೆಡ್ಡಿ ಕೂಡ ಕಾಣಿಸಿಕೊಂಡಿದ್ದಾರೆ. ಗಣ್ಯರೆನ್ನಿಸಿಕೊಂಡವರಿಗೆ ಆಮಂತ್ರಣ ಪತ್ರಿಕೆಯಲ್ಲಿ ಮಿನಿಟೀವಿಯನ್ನೇ ಕರೆಯೋಲೆಯಾಗಿ ನೀಡುವ ಮೂಲಕ ಜನಸಾಮಾನ್ಯರು ಹುಬ್ಬೇರಿಸುವಂತೆ ಮಾಡಿದ್ದು, ಈ ಇನ್ವಿಟೇಷನ್ ಹೇಗಿದೆ ನೀವೇ ನೋಡಿ